ತನ್ನ ತಾಯಿಯ ಮೇಲೆ ಸಿಟ್ಟುಗೊಂಡ 11 ವರ್ಷದ ಚೀನಾದ ಬಾಲಕನೊಬ್ಬ ಆಕೆಯ ಮೇಲೆ ಅಜ್ಜಿಯ ಬಳಿ ದೂರು ಹೇಳಲು 130 ಕಿ. ಮೀ. ಬೈಸಿಕಲ್ ತುಳಿದುಕೊಂಡು ಹೋಗಿದ್ದಾನೆ.
24 ಗಂಟೆಯಷ್ಟು ಹೊತ್ತು ನಿರಂತರವಾಗಿ ಬೈಸಿಕಲ್ ತುಳಿದಿದ್ಧ ಬಾಲಕ ಎಕ್ಸ್‌ಪ್ರೆಸ್‌ವೇನಲ್ಲಿ ಏಕಾಂಗಿಯಾಗಿ ದಣಿದ ಸ್ಥಿತಿಯಲ್ಲಿ ದಾರಿ ಹೋಕರಿಗೆ ಕಂಡು ಬಂದಿದ್ದಾನೆ.
ತಾಯಿಯೊಂದಿಗೆ ವಾಗ್ವಾದಕ್ಕಿಳಿದು ಭಾರೀ ಬೇಸರಗೊಂಡಿದ್ದ ಈ ಬಾಲಕ, ಜ಼ೆಝಿಯಾಂಗ್ ಪ್ರಾಂತ್ಯದ ಮೆಯ್ಜಿಯಾಂಗ್ ಕೌಂಟಿಯಲ್ಲಿರುವ ತನ್ನ ಅಜ್ಜಿಯ ಮನೆಗೆ ಈ ಸುದೀರ್ಘ ಪಯಣಕ್ಕೆ ಮುಂದಾಗಿದ್ದಾನೆ.
ರಸ್ತೆಯಲ್ಲಿರುವ ದಿಕ್ಸೂಚಿಗಳನ್ನು ಆಧರಿಸಿ ಸಾಗಿದ ಬಾಲಕ ಮನೆಯಿಂದ ಹೊರಡುವಾಗ ತಂದಿದ್ದ ಬ್ರೆಡ್ ಹಾಗೂ ಕುಡಿಯುವ ನೀರು ಸವಿದು ರಾತ್ರಿ ಕಳೆದಿದ್ದಾನೆ. ತನ್ನ ಅಜ್ಜಿ ಮನೆಗೆ ಇನ್ನೊಂದೇ ಗಂಟೆಯಷ್ಟು ದೂರವಿದ್ದಾಗ ಬಾಲಕನನ್ನು ಪೊಲೀಸರು ರಕ್ಷಿಸಿದ್ದಾರೆ. ಅದೇ ದಿನ ಸಂಜೆ ಬಾಲಕನನ್ನು ಆತನ ಹೆತ್ತವರು ಹಾಗೂ ಅಜ್ಜ-ಅಜ್ಜಿ ಬಂದು ಕರೆದುಕೊಂಡು ಹೋಗಿದ್ದಾರೆ.
’ಅಜ್ಜಿ ಮನೆಗೆ ಹೋಗುತ್ತೇನೆ’ ಎಂದು ತನ್ನ ಮಗ ಹೇಳಿದ್ದು ಕೇವಲ ತನ್ನನ್ನು ಹೆದರಿಸಲು ಎಂದು ಭಾವಿಸಿದ್ದಾಗಿ ಆತನ ತಾಯಿ ಹೇಳಿಕೊಂಡಿದ್ದಾರೆ.