alex Certify ತಾಯಿ ಮಮತೆ ಅಂದ್ರೆ ಇದೇ ಅಲ್ವಾ….? ಮಗುವನ್ನು ರಕ್ಷಿಸಿದ ಮಹಿಳೆ ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಮಮತೆ ಅಂದ್ರೆ ಇದೇ ಅಲ್ವಾ….? ಮಗುವನ್ನು ರಕ್ಷಿಸಿದ ಮಹಿಳೆ ಹಳೆ ವಿಡಿಯೋ ಮತ್ತೆ ವೈರಲ್

ಕಾರುಗಳನ್ನು ಎತ್ತುವುದರಿಂದ ಹಿಡಿದು ಬಂಡೆಯಿಂದ ಜಿಗಿಯುವವರೆಗೆ ತನ್ನ ಮಗುವನ್ನು ರಕ್ಷಿಸಲು ತಾಯಿ ಯಾವುದೇ ಹಂತಕ್ಕೂ ಹೋಗಬಹುದು. ತನ್ನ ಪ್ರಾಣವನ್ನು ಒತ್ತೆಯಿಟ್ಟಾದ್ರೂ ಸರಿ ಮಗುವನ್ನು ಕಾಪಾಡುತ್ತಾಳೆ. ಇದಕ್ಕೆ ಅಂತರ್ಜಾಲದಲ್ಲಿನ ಹಲವಾರು ವಿಡಿಯೋಗಳು ಈ ಸತ್ಯವನ್ನು ಸಾಬೀತುಪಡಿಸುತ್ತವೆ. ಇದೀಗ, ಟ್ರಕ್‌ನಿಂದ ತನ್ನ ಮಗುವನ್ನು ರಕ್ಷಿಸಿದ ತಾಯಿಯ ಹಳೆಯ ವಿಡಿಯೋ ಟ್ವಿಟರ್‌ನಲ್ಲಿ ಮರುಕಳಿಸಿದೆ.

2019 ರಲ್ಲಿ ವಿಯೆಟ್ನಾಂನ ಗೋಯಿ ನಾಮ್ ದಿನ್‌ನಲ್ಲಿ ನಡೆದ ಈ ಘಟನೆಯನ್ನು ಕ್ರಿಕೆಟಿಗ ಜೋಫ್ರಾ ಆರ್ಚರ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹೆದ್ದಾರಿಯ ಮಧ್ಯದಲ್ಲಿ ಮಹಿಳೆ ತನ್ನ ಪತಿಯೊಂದಿಗೆ ಬೈಕ್ ನಲ್ಲಿ ಚಲಿಸುತ್ತಿದ್ದರು. ಈ ವೇಳೆ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಈ ವೇಳೆ ಹಿಂಬದಿ ಕುಳಿತಿದ್ದ ತಾಯಿ, ಮಗು ರಸ್ತೆಗೆ ಬಿದ್ದಿದ್ದಾರೆ. ಎದುರುಗಡೆಯಿಂದ ವೇಗವಾಗಿ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿಯಾಗದಂತೆ ತಾಯಿ ತನ್ನ ಮಗುವನ್ನು ಎಳೆದೊಯ್ದಿದ್ದಾಳೆ.

ಈ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ವಿಡಿಯೋವನ್ನು 4.9 ಮಿಲಿಯನ್ ಮಂದಿ ವೀಕ್ಷಿಸಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಮಹಿಳೆಯ ತ್ವರಿತ ಜಾಗರೂಕತೆಯನ್ನು ಕಂಡು ಅನೇಕರು ಆಶ್ಚರ್ಯಚಕಿತರಾಗಿದ್ದಾರೆ. ಇದೀಗ ಹಳೆ ವಿಡಿಯೋ ಮತ್ತೆ ವೈರಲ್ ಆಗಿದೆ.

— Jofra Archer (@JofraArcher) April 25, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...