ಅಪ್ರಾಪ್ತ ಸಂತ್ರಸ್ತೆಯೊಬ್ಬಳು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಪೂರ್ವ ಮಗುವಿಗೆ ಜನ್ಮ ನೀಡಿದ ಘಟನೆಯು ಚೆನ್ನೈನಲ್ಲಿ ನಡೆದಿದೆ. ವರದಿಗಳ ಪ್ರಕಾರ ಈ ಅಪ್ರಾಪ್ತೆಯ ಮೇಲೆ ಕನಿಷ್ಟ ಅಂದರೂ ನಾಲ್ವರು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಬಾಲಕಿಯ ತಾಯಿ ಕೂಡ ಭಾಗಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಈ ಕುರಿತು ವಾಷರ್ಮೆನ್ಪೇಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಸಂತ್ರಸ್ತೆಯ ತಾಯಿ ಹಾಗೂ ಆಕೆಯ 51 ವರ್ಷದ ಪ್ರಿಯಕರನನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಇನ್ನಿಬ್ಬರ ಬಂಧನಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.
ಈ ಕೆಲಸಗಳನ್ನು ಮಾಡಿದ್ರೆ ಜ್ಞಾನದ ಜೊತೆ ದೂರವಾಗುತ್ತೆ ಸುಖ-ಶಾಂತಿ
ಪ್ರಕರಣದ ಪ್ರಮುಖ ಆರೋಪಿ ದೊರೈರಾಜ್ ಎಂಬಾತ ಸಂತ್ರಸ್ತೆಯ ತಾಯಿಯ ಜೊತೆಯಲ್ಲಿ ಕೆಳದ ಕೆಲ ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ತನಿಖೆಯ ವೇಳೆ ಸಂತ್ರಸ್ತೆಯು ನನ್ನ ತಾಯಿಯ ಜೊತೆ ಸಂಪರ್ಕ ಹೊಂದಿದ್ದ ದಾಮೋದರನ್ ಎಂಬಾತ ನನ್ನ ಮೇಲೆ ಅತ್ಯಾಚಾರ ಎಸಗಿದ ಬಳಿಕ ತಾನು ಗರ್ಭಿಣಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಇನ್ನಿಬ್ಬರು ಆರೋಪಿಗಳನ್ನು ಬಶೀರ್ ಹಾಗೂ ಜಮಾಲ್ ಎಂದು ಗುರುತಿಸಲಾಗಿದೆ.
ತಾಯಿ ಸಮ್ಮುಖದಲ್ಲಿ ಹಾಗೂ ತಾಯಿ ಇಲ್ಲದ ಸಂದರ್ಭದಲ್ಲಿ ನನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಲಾಗಿದೆ ಎಂದು 17 ವರ್ಷದ ಸಂತ್ರಸ್ತೆ ಹೇಳಿದ್ದಾಳೆ. ಸಂತ್ರಸ್ತೆಯ ಹೇಳಿಕೆ ಆಧರಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.