ಪುತ್ತೂರು : ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು, ಪಾಪಿ ಮಗನೊಬ್ಬ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ.
ತಾಲೂಕಿನ ಕೆದಂಬಾಡಿಯ ಕುರಿಕ್ಕಾರದಲ್ಲಿ ಈ ಘಟನೆ ನಡೆದಿದ್ದು, ಪಾಪಿ ಮಗನೇ ಅತ್ಯಾಚಾರ ನಡಸಿದ್ದಾನೆ. ಈ ಕುರಿತು ಸಂತ್ರಸ್ತ ತಾಯಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
35 ವರ್ಷದ ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ ತವರು ಮನೆಯಲ್ಲಿ ಇದ್ದಾರೆ. ಮಂಗಳವಾರ ರಾತ್ರಿ ಎಂದಿನಂತೆ ಆರೋಪಿಯು ಊಟ ಮಾಡಿ ತನ್ನ ಕೋಣೆಯೊಳಗೆ ಮಲಗಿದ್ದಾನೆ. ಆದರೆ, ಮಧ್ಯರಾತ್ರಿ ಕೋಣೆಯಿಂದ ಹೊರ ಬಂದು ತಾಯಿಯ ರೂಂಗೆ ನುಗ್ಗಿ ತಾಯಿಯ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ.
ಅಲ್ಲದೇ, ಮರುದಿನ ಬೆಳಿಗ್ಗೆ ತಾಯಿ ವಿರೋಧಿಸಿ, ಆತನನ್ನು ತಳ್ಳಿದರೂ ಬಾಯಿಗೆ ಬಟ್ಟೆ ತುರುಕಿ ಮತ್ತೊಮ್ಮೆ ಅತ್ಯಾಚಾರ ನಡೆಸಿದ್ದಾನೆ.
ಸದ್ಯ ಸಂತ್ರಸ್ತ ಮಹಿಳೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನ ಕೃತ್ಯಕ್ಕೆ ಮನನೊಂದ ಮಹಿಳೆ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.