ಬೆಂಗಳೂರು: ಸ್ವಂತ ತಾಯಿಯ ಚಿನ್ನಾಭರಣವನ್ನೇ ಕದ್ದು ಮಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ.
ಈ ಕುರಿತು ತಾಯಿ ವಿಜಯಲಕ್ಷ್ಮಿ ತಮ್ಮ ಮಗಳು ತೇಜವಂತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 7.5 ಕೆಜಿ ಚಿನ್ನ, ವಜ್ರದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ.
ತಾನು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಚಿನ್ನಾಭರಣಗಳನ್ನು ಮಗಳಿಗೆ ಭದ್ರವಾಗಿಡುವಂತೆ ಹೇಳಿ ಕೊಟ್ಟಿದ್ದೆ. ಆಸ್ಪತ್ರೆಯಿಂದ ಮನೆಗೆ ಬಂದು ನೋಡಿದಾಗ ಒಡವೆಗಳು ಕಾಣುತ್ತಿಲ್ಲ. ಮಗಳಿಗೆ ಕಾಲ್ ಮಾಡಿದರೆ ಮೊಬೈಲ್ ಸ್ವಿಚ್ಡ್ ಆಫ್ ಬರುತ್ತಿದೆ. ಹೀಗಾಗಿ ಠಾಣೆ ಮೆಟ್ಟಿಲೇರಿರುವ ತಾಯಿ, ಮಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ಮಗಳ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.