ದೆಹಲಿಯ ರೋಹಿಣಿ ಎಂಬಲ್ಲಿ 25 ವರ್ಷದ ಯುವಕನೊಬ್ಬ ತಾಯಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿಯನ್ನು ಮೂರು ದಿನಗಳ ಹಿಂದೆಯೇ ಆತ ಹತ್ಯೆ ಮಾಡಿದ್ದಾನೆಂದು ಶಂಕಿಸಲಾಗಿದೆ. ಮಿಥಿಲೇಶ್ ಎಂಬ ಮಹಿಳೆಯ ಶವ ಮನೆಯ ಸ್ನಾನದ ಕೋಣೆಯಲ್ಲಿ ಪತ್ತೆಯಾಗಿದೆ.
ಯುವಕ ಕ್ಷಿತಿಜ್, ಚಾಕು ಇರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತದೇಹಗಳು ಕೊಳೆತು ವಾಸನೆ ಬರಲಾರಂಭಿಸಿತ್ತು. ಇದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಮನೆಯ ಬಾಗಿಲು ಮುರಿದು ಪೊಲೀಸರು ಒಳಪ್ರವೇಶಿಸಿದ್ದಾರೆ. ಬಾಲ್ಕನಿಯಲ್ಲಿ ಕ್ಷಿತಿಜ್ ಶವ ಪತ್ತೆಯಾಗಿದೆ. ಬಾತ್‌ರೂಮಿನಲ್ಲಿದ್ದ ತಾಯಿಯ ಶವ ಸಂಪೂರ್ಣ ಕೊಳೆತುಹೋಗಿತ್ತು.
ಕ್ಷಿತಿಜ್ 77 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾನೆ. ನಿರುದ್ಯೋಗದಿಂದಾಗಿ ತಾನು ಖಿನ್ನತೆಗೆ ಒಳಗಾಗಿದ್ದು, ತಾಯಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ತಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಗುರುವಾರ ಆತ ತಾಯಿಯನ್ನು ಕೊಂದಿದ್ದಾನೆ. ಬಳಿಕ ಚಾಕುವಿನಿಂದ ಕುತ್ತಿಗೆಗೆ ಇರಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಘಟನೆ ಹಿಂದೆ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳ ಕೈವಾಡವಿರುವ ಬಗ್ಗೆ ಸುಳಿವು ಸಿಕ್ಕಿಲ್ಲ. ಮೃತರ ಸಂಬಂಧಿಕರನ್ನು ಸಂಪರ್ಕಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.