ಬೆಳಗ್ಗೆ ರಾಬರಿ ಆಗಿದೆ ಎಂದು ದೂರು ನೀಡಿದ್ದವನೆ ಸಂಜೆ ವೇಳೆಗೆ ಅರೋಪಿಯಾಗಿ ಬಂಧಿಸಲ್ಪಟ್ಟಿದ್ದಾನೆ. ತನ್ನ ಬಳಿಯಲ್ಲಿ ಇದ್ದ ನಾಲ್ಕು ಲಕ್ಷ ಹಣ ದೋಚಿದ್ದಾರೆ ಎಂದು ಬೆಳಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ ವ್ಯಕ್ತಿಯೆ ಇದೇ ಪ್ರಕರಣದಲ್ಲಿ ಆರೋಪಿ ಎಂದು ಬಯಲಾಗಿದೆ. ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅರುಣ್, ಬೆಂಗಳೂರಿನಲ್ಲಿ ಇರುವ ಅಟ್ಟಿಕಾ ಬ್ರಾಂಚ್ ಗಳಿಗೆ ಹಣ ನೀಡುವ ಕೆಲಸ ಮಾಡ್ತಿದ್ದಾ. ಬೆಳಗ್ಗೆ ಮೇನ್ ಬ್ರಾಂಚ್ ನಿಂದ ಇತರೆ ಬ್ರಾಂಚ್ ಗಳಿಗೆ ನೀಡಲು ಎಂಟು ಲಕ್ಷ ಹಣ ತಂದಿದ್ದ ಆರೋಪಿ, ನಾಲ್ಕು ಲಕ್ಷ ಬ್ಯಾಟರಾಯನಪುರ ಬ್ರಾಂಚ್ ಗೆ ನೀಡಿದ್ದ. ಇನ್ನುಳಿದ ನಾಲ್ಕು ಲಕ್ಷವನ್ನ ಜೆ.ಪಿ.ನಗರದಲ್ಲಿರುವ ತನ್ನ ಮನೆಯಲ್ಲಿಟ್ಟಿದ್ದ ಅರುಣ್, ನಾಯಂಡಳ್ಳಿ ಜಂಕ್ಷನ್ ಬಳಿ ದುಷ್ಕರ್ಮಿಗಳು ನನ್ನ ಮೇಲೆ ದಾಳಿ ಮಾಡಿ, ಕಣ್ಣಿಗೆ ಕಾರದಪುಡಿ ಎರಚಿ ಹಣ ದೋಚಿದ್ದರು ಎಂದು ದೂರು ನೀಡಿದ್ದ.
ಅರುಣ್ ಕುಮಾರ್ ದೂರು ನೀಡಿದ ಬಳಿಕ, ಕೇಸ್ ದಾಖಲು ಮಾಡಿಕೊಂಡು ಬ್ಯಾಟರಾಯನಪುರ ಪೊಲೀಸರು, ತನಿಖೆ ಶುರು ಮಾಡಿದ್ದರು. ತನಿಖೆ ವೇಳೆ ರಾಬರಿ ಅಗಿದೆ ಅನ್ನೊದಕ್ಕೆ ಯಾವುದೇ ಸಾಕ್ಷಿಗಳು ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದವನ ಮೇಲೆ ಅನುಮಾನ ಮೂಡಿದೆ. ನಂತರ ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವನೇ ದುಡ್ಡನ್ನ ದೋಚಿರುವುದಾಗಿ ಒಪ್ಪಿಕೊಂಡಿದ್ದಾನೆ.
ಉಂಡ ಮನೆಗೆ ಕನ್ನ ಹಾಕಿದ್ದಾದರು ಏಕೆ ಎಂದು ಕೇಳಿದಾಗ, ಅರುಣ್ ಸತ್ಯ ಹೇಳಿದ್ದಾನೆ. ಒಂದು ಲಕ್ಷ ಅಡ್ವಾನ್ಸ್ ಹಣ ನೀಡಿ ಎಂದು ಅರುಣ್ ತನ್ನ ಮಾಲೀಕ ಅಟ್ಟಿಕಾ ಬಾಬು ಬಳಿ ಕೇಳಿದ್ದ. ಬಾಬುರವರು ಅರುಣ್ ಗೆ ಹಣ ನೀಡಿರಲಿಲ್ಲಾ. ಇದ್ರಿಂದ ಕೋಪಗೊಂಡಿದ್ದ ಅರುಣ್, ತನ್ನ ಕೈಗೆ ಬರೊ ವ್ಯವಹಾರದ ಹಣವನ್ನೆ ದೋಚಲು ಹೊಂಚು ಹಾಕಿ ಪ್ಲಾನ್ ರೂಪಿಸಿದ್ದ. ಅದ್ರಂತೆ ಯಾರೊ ರಾಬರಿ ಮಾಡಿದ್ದಾರೆ ಎಂದು ಕಥೆ ಕಟ್ಟಿ, ಮನೆಯಲ್ಲಿ ಇಟ್ಟಿದ್ದ ಹಣ ರಾಬರಿ ಅಗಿದೆ ಎಂದು ತನ್ನ ಮೇಲೆ ತಾನೇ ಕಾರದ ಪುಡಿ ಹಾಕಿಕೊಂಡು ಬಂದಿದ್ದ. ಸಧ್ಯ ಅರುಣ್ ವಿರುದ್ಧ ಕೇಸ್ ದಾಖಲಿಸಿರುವ ಪೊಲೀಸರು ಆತನನ್ನ ಅರೆಸ್ಟ್ ಮಾಡಿದ್ದಾರೆ.