ಕರಿಬೇವಿನ ಸೊಪ್ಪನ್ನು ಪ್ರತಿಬಾರಿ ಅಂಗಡಿಯಿಂದ ತರುವ ಬದಲು ಮನೆಯ ಹಿತ್ತಲಲ್ಲೇ ಬೆಳೆದು ಬಳಸುವುದು ಒಳ್ಳೆಯದು. ಅಂಗಡಿಯಿಂದ ತಂದರೆ ಅದನ್ನು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ.
ಬಹುಬೇಗ ಹಾಳಾಗುವ ಇಲ್ಲವೇ ಕಪ್ಪಾಗುವ ಕರಿಬೇವನ್ನು ಸಂಗ್ರಹಿಸಿಡುವುದು ಸವಾಲಿನ ಕೆಲಸವೂ ಹೌದು. ಫ್ರಿಜ್ ನಲ್ಲಿಟ್ಟರೆ ಬಣ್ಣ ಬದಲಾಯಿಸಿಕೊಳ್ಳುವ ಈ ಸೊಪ್ಪಿನ ಸರಳ ಸಂರಕ್ಷಣೆಯ ವಿಧಾನವನ್ನು ತಿಳಿಯೋಣ.
ಸಾಧ್ಯವಾದಷ್ಟು ತಂದ ದಿನವೇ ಅಥವಾ ಮರುದಿನದೊಳಗೆ ಬಳಸಿ. ಇದನ್ನು ಸಂಗ್ರಹಿಸಿಟ್ಟರೆ ಅದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳು ನಾಶವಾಗುತ್ತವೆ. ನಿತ್ಯ ಇದನ್ನು ಸೇವಿಸುವುದರಿಂದ ಅಜೀರ್ಣತೆ, ಮಲಬದ್ಧತೆ ವಾಂತಿ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಸಂಗ್ರಹಿಸಿಟ್ಟ ಸೊಪ್ಪಿನಿಂದ ಈ ಪ್ರಯೋಜನ ದೊರೆಯದು.
ಕರಿಬೇವಿನ ಸೊಪ್ಪನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ದೂರವಾಗಿ ಸೊಂಪಾಗಿ ದಪ್ಪಗೆ ಬೆಳೆಯುತ್ತದೆ. ಅಲ್ಲದೆ ಕೂದಲು ಉದುರುವ ಸಮಸ್ಯೆಯೂ ದೂರವಾಗುತ್ತದೆ. ಆದರೆ ನಾಲ್ಕಾರು ದಿನ ಸಂಗ್ರಹಿಸಿಟ್ಟ ಕರಿಬೇವಿನಿಂದ ಈ ಪ್ರಯೋಜನ ದೊರೆಯದು.