ಹಾಟ್ ಏರ್ ಬಲೂನ್ ಸವಾರಿ ಮಾಡಿರುವ ಆಸ್ಟ್ರೇಲಿಯಾದ ಸಾಹಸಿಗರ ಗುಂಪಿಗೆ ಆಘಾತವಾಗಿರೋ ಘಟನೆ ನಡೆದಿದೆ. ಹಾಟ್ ಏರ್ ಬಲೂನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ವಸತಿ ಅಪಾರ್ಟ್ಮೆಂಟ್ಗಳ ಮೇಲ್ಛಾವಣಿ ಬಿದ್ದಿದೆ.
ಏರ್ ಬಲೂನ್ ಮನೆಗಳ ಛಾವಣಿಗಳು ಮತ್ತು ಮರಗಳ ಮೇಲಿನಿಂದ ಹಾದು ಹೋಗುವಾಗ ಅದರಲ್ಲಿದ್ದವರು ಬುಟ್ಟಿಯಲ್ಲಿ ಖುಷಿಯಿಂದ ತೇಲಾಡಿದ್ದಾರೆ. ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಏರ್ ಬಲೂನ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದೆ. ಇದರಿಂದ ಏಕಾಏಕಿ ಕೆಳಕ್ಕೆ ಕುಸಿಯುತ್ತಾ ಬಂದಿದೆ.
ಬಲೂನ್ ಮರದ ಕೊಂಬೆಗಳಿಗೆ ಬಡಿಯುತ್ತಾ ಕೆಳಗಿಳಿದಿದೆ. ಇದರಿಂದ ಪ್ರಯಾಣಿಕರು ಭಯದಿಂದ ತತ್ತರಿಸಿದ್ದಾರೆ. ಪೈಲಟ್ ಸೇರಿದಂತೆ 13 ಜನರಿದ್ದ ಬಲೂನ್ ಎಲ್ವುಡ್ ಅಂಗಳದಲ್ಲಿ ಪತನಗೊಂಡಿದ್ದು, ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ.
ಫೇಸ್‌ಬುಕ್‌ನಲ್ಲಿ ಈ ವಿಡಿಯೋವನ್ನು ಮಗೂಕಿನ್ ಹಂಚಿಕೊಂಡಿದ್ದಾರೆ. ನಾವೆಲ್ಲರೂ ನಮ್ಮ ಜೀವನದಿಂದ ಮತ್ತು ಯಾವುದೇ ಗಾಯಗಳಿಲ್ಲದೆ ಇದರಿಂದ ಹೇಗೆ ಪಾರಾದೆವು ಎಂಬುದು ತಿಳಿದಿಲ್ಲ ಎಂದು ಅವರು ಬರೆದಿದ್ದಾರೆ.
30 ವರ್ಷಗಳ ಅನುಭವ ಹೊಂದಿರುವ ಪೈಲಟ್ ಸಮಯಕ್ಕೆ ಸರಿಯಾಗಿ ಏರ್ ಬಲೂನ್ ಅನ್ನು ಭೂಮಿಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಲೂನ್ ಕ್ರ್ಯಾಷ್ ಆಗಿರೋ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಆಸ್ಟ್ರೇಲಿಯನ್ ಟ್ರಾನ್ಸ್‌ಪೋರ್ಟ್ ಸೇಫ್ಟಿ ಬ್ಯೂರೋ ಈ ಬಗ್ಗೆ ತನಿಖೆ ನಡೆಸುತ್ತಿದೆ. ಪೈಲಟ್ ಹಾಗೂ ಸಂದರ್ಶಕರಿಂದ ಮಾಹಿತಿಗಳನ್ನು ಕಲೆ ಹಾಕುತ್ತಿದೆ.