
ರೋಸ್ ವಾಟರ್ ಕೇವಲ ಮುಖದ ಅಥವಾ ತ್ವಚೆಯ ಸೌಂದರ್ಯ ಹೆಚ್ಚಿಸಲು ಮಾತ್ರ ಮೀಸಲಲ್ಲ. ಇದರಿಂದ ಉದ್ದನೆಯ ಕೂದಲನ್ನೂ ಪಡೆಯಬಹುದು ಎಂಬುದು ನಿಮಗೆ ಗೊತ್ತೇ?
ನಿಮ್ಮ ಕೂದಲು ಸದಾ ಎಣ್ಣೆಯುಕ್ತವಾಗಿದ್ದರೆ ರೋಸ್ ವಾಟರ್ ಬಳಸಿ. ಇದರೊಂದಿಗೆ ಮುಲ್ತಾನಿ ಮಿಟ್ಟಿಯನ್ನೂ ಬಳಸಿ ನೋಡಿ. ನಿಮ್ಮ ಕೂದಲಿನ ಸಮಸ್ಯೆ ಬಹುಬೇಗ ದೂರವಾಗುತ್ತದೆ. ಇದು ಕೂದಲಿನ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.
ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸುವ ಶಕ್ತಿಯೂ ಇದಕ್ಕಿದೆ. ಶ್ಯಾಂಪುಗಳಿಗಿಂತಲೂ ರೋಸ್ ವಾಟರ್ ನಲ್ಲಿರುವ ನೈಸರ್ಗಿಕ ಶಕ್ತಿ ಹೆಚ್ಚಿನದು. ಕೂದಲಿಗೆ ಹೊಳಪು ನೀಡುವ ಗುಣವೂ ರೋಸ್ ವಾಟರ್ ನಲ್ಲಿದೆ.
ಹಾನಿಗೊಳಗಾದ ಕೂದಲನ್ನು ಸರಿಮಾಡುವ ರೋಸ್ ವಾಟರ್ ಅನ್ನು ನಿತ್ಯ ನೆತ್ತಿಯ ಮೇಲೆ ತಿಕ್ಕಿ ಮಸಾಜ್ ಮಾಡಿ. ಇದರಿಂದ ರಕ್ತ ಪರಿಚಲನೆ ಹೆಚ್ಚಿ ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯುತ್ತದೆ.
ಇದರೊಂದಿಗೆ ವಿಟಮಿನ್ ಇಯನ್ನು ಸೇರಿಸಿದರೆ ಅತ್ಯುತ್ತಮ ಪ್ರಭಾವವನ್ನು ಪಡೆಯಬಹುದು. ನಿಯಮಿತವಾಗಿ ಅಂದರೆ ವಾರಕ್ಕೆರಡು ಬಾರಿ ಇದನ್ನು ಬಳಸಿದರೆ ನಿಮ್ಮ ಕೂದಲು ದಪ್ಪವಾಗಿಯೂ ಬೆಳೆಯುತ್ತದೆ.