
ಪ್ರತಿಯೊಬ್ಬ ಮಹಿಳೆ ಅಂದವನ್ನು ಕೂದಲು ಹೆಚ್ಚಿಸುತ್ತದೆ. ಸುಂದರವಾಗಿ ಕಾಣಲು ಮಹಿಳೆಯರು ಕೂದಲಿನ ಆರೈಕೆ ಮಾಡ್ತಾರೆ. ಕಪ್ಪನೆಯ ಉದ್ದನೆ ಕೂದಲು ಮಹಿಳೆ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ ಶಾಸ್ತ್ರದಲ್ಲೂ ಮಹಿಳೆ ಕೂದಲಿನ ಬಗ್ಗೆ ಸಾಕಷ್ಟು ಹೇಳಲಾಗಿದೆ.
ಮುಟ್ಟಿನ ಮೊದಲ ದಿನ ಕೂದಲನ್ನು ತೊಳೆಯಬಾರದು. ಮಹಿಳೆಯರು ಮುಟ್ಟಿನ ಮೊದಲ ದಿನ ಕೂದಲನ್ನು ಸ್ವಚ್ಛಗೊಳಿಸುವುದು ಅಶುಭ. ಮಹಿಳೆಯರ ಕಷ್ಟ ಹೆಚ್ಚಾಗುತ್ತದೆ. ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಮುಟ್ಟಿನ ಸಮಯದಲ್ಲಿ ತಲೆ ಸ್ನಾನ ಮಾಡಿದ್ರೆ ನೆಗಡಿಯಾಗುವ ಸಾಧ್ಯತೆಯಿರುತ್ತದೆ. ಗರ್ಭಧಾರಣೆ ಮೇಲೂ ಇದು ಪ್ರಭಾವ ಬೀರುತ್ತದೆ.
ಕೂದಲನ್ನು ಬಾಚುವಾಗ ಬಾಚಣಿಕೆ ಕೆಳಗೆ ಬಿದ್ರೆ ಇದು ಅಪಶಕುನ. ಕೆಟ್ಟ ಘಟನೆ ಅಥವಾ ಸುದ್ದಿ ಕಿವಿಗೆ ಬೀಳಲಿದೆ ಎಂದರ್ಥ. ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುವುದು ಕೂಡ ಶುಭವಲ್ಲ. ಕೂದಲು ಉದುರಿ ಮನೆ ತುಂಬ ಬಿದ್ರೆ ಮನೆಯಲ್ಲಿ ಕಲಹ ನಡೆಯುತ್ತದೆ ಎಂದರ್ಥ.
ಉದುರಿದ ಕೂದಲನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬಾರದು. ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ. ಉದುರಿದ ಕೂದಲನ್ನು ತಂತ್ರ-ಮಂತ್ರಕ್ಕೂ ಬಳಸಲಾಗುತ್ತದೆ.