ಒತ್ತಡದ ಜೀವನ ಮನುಷ್ಯ ಹಾಸಿಗೆ ಹಿಡಿಯುವಂತೆ ಮಾಡ್ತಿದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡೋದು, ಸದಾ ಮೊಬೈಲ್ ನಲ್ಲಿ ಮಾತನಾಡುವುದರಿಂದ ಹಿಡಿದು ಹೊರಗಿನ ವಾತಾವರಣ ಆಗಾಗ ತಲೆ ನೋವು ಬರುವಂತೆ ಮಾಡ್ತಾ ಇದೆ.
ಪ್ರತಿದಿನ ತಲೆ ನೋವು ಎನ್ನುವವರ ಸಂಖ್ಯೆಯೂ ದೊಡ್ಡದಾಗಿದೆ. ತಲೆನೋವು ಬಂದ ತಕ್ಷಣ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ನುಂಗ್ತಾರೆ. ಆದ್ರೆ ಮಾತ್ರೆಗಿಂತ ಮನೆಮದ್ದು ಒಳ್ಳೆಯದು. ಅದಕ್ಕೆ ನೀವು ತುಂಬಾ ಕಷ್ಟಪಡಬೇಕಾಗಿಲ್ಲ. ಅಡುಗೆ ಮನೆಗೆ ಹೋಗಿ ಆಲೂಗಡ್ಡೆ ತಂದ್ರೆ ಸಾಕು.
ಹೌದು, ಆಲೂಗಡ್ಡೆ ತಲೆನೋವನ್ನು ಕೆಲವೇ ಕ್ಷಣಗಳಲ್ಲಿ ದೂರ ಮಾಡಿ ನೆಮ್ಮದಿ ನೀಡುತ್ತದೆ. ಸಾಮಾನ್ಯವಾಗಿ ಪಾರ್ಟಿಗೆ ಹೋಗುವ ಮಂದಿ ಮರುದಿನ ಅದೇ ಹ್ಯಾಂಗೋವರ್ ನಲ್ಲಿರ್ತಾರೆ. ತಲೆ ನೋವು ಎನ್ನುವವರು ಈ ಹ್ಯಾಂಗೋವರ್ ಬರದಂತೆ ನೋಡಿಕೊಳ್ಳಬಹುದು. ಪಾರ್ಟಿಗೆ ಹೋಗುವ ಮುನ್ನ ಅಥವಾ ಡ್ರಿಂಕ್ಸ್ ಮಾಡುವ ಮುನ್ನ ಸ್ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ತಿನ್ನಿ. ಹೀಗೆ ಮಾಡಿದ್ರೆ ಪಾರ್ಟಿ ನಂತ್ರ ಹ್ಯಾಂಗೋವರ್ ಸಮಸ್ಯೆ ನಿಮಗಿರೋದಿಲ್ಲ.
ಕೆಲಸ ಜಾಸ್ತಿಯಾಗಿ ಒತ್ತಡ ಹೆಚ್ಚಾಗಿ ಅನೇಕರಿಗೆ ತಲೆನೋವು ಬರುತ್ತೆ. ಅಂತವರ ತಲೆ ನೋವು ಒಂದು ಆಲೂಗಡ್ಡೆಯಿಂದ ಕಡಿಮೆಯಾಗುತ್ತೆ ಅಂದ್ರೆ ನಂಬ್ತೀರಾ. ಮೊದಲು ಒಂದು ಆಲೂಗಡ್ಡೆಯನ್ನು ತಂದು ಸ್ಲೈಸ್ ಮಾಡಿ. ನಂತ್ರ ಶಾಂತವಾದ ಜಾಗದಲ್ಲಿ ಕುಳಿತುಕೊಂಡು ಹಣೆಯ ಮೇಲಿಟ್ಟುಕೊಂಡು, ಬಿಗಿಯಾಗಿ ಬಟ್ಟೆ ಬಿಗಿದುಕೊಳ್ಳಿ. ಕಣ್ಣು ಮುಚ್ಚಿ ಸ್ವಲ್ಪ ಹೊತ್ತು ಶಾಂತವಾಗಿ ಕುಳಿತುಕೊಂಡ್ರೆ ನಿಮ್ಮ ತಲೆನೋವು ಮಾಯವಾಗುತ್ತೆ.
ಆಲೂಗಡ್ಡೆ ರಸ ಕೂಡ ನಿಮ್ಮ ತಲೆನೋವನ್ನು ಕಡಿಮೆ ಮಾಡುತ್ತದೆ. ಒಂದು ಸ್ವಚ್ಛ ಬಟ್ಟೆಯನ್ನು ತೆಗೆದುಕೊಳ್ಳಿ. ಆಲೂಗಡ್ಡೆ ರಸವನ್ನು ಸಿದ್ಧಪಡಿಸಿಕೊಂಡು ಅದರಲ್ಲಿ ಬಟ್ಟೆಯನ್ನು ಅದ್ದಿ, ಆ ಬಟ್ಟೆಯನ್ನು ತಲೆಗೆ ಬಿಗಿಯಾಗಿ ಕಟ್ಟಿಕೊಳ್ಳಿ. ಬಟ್ಟೆ ಬಿಸಿಯಾದ ತಕ್ಷಣ ತೆಗೆದು ಮತ್ತೆ ರಸದಲ್ಲಿ ಅದ್ದಿ ಕಟ್ಟಿಕೊಳ್ಳಿ.
ಆಲೂಗಡ್ಡೆ ಸಿಪ್ಪೆಯಿಂದಲೂ ನಿಮ್ಮ ತಲೆ ನೋವನ್ನು ಕಡಿಮೆ ಮಾಡಬಹುದು. ಆಲೂಗಡ್ಡೆಯಿಂದ ಸಬ್ಜಿ ತಯಾರಿಸಿ. ತೆಗೆದ ಸಿಪ್ಪೆಯನ್ನು ತಲೆಗೆ ಬಟ್ಟೆಯ ಸಹಾಯದಿಂದ ಕಟ್ಟಿಕೊಳ್ಳಿ. ಇದರಿಂದಲೂ ನಿಮ್ಮ ತಲೆನೋವು ಮಾಯವಾಗಲಿದೆ.