ತಲೆ ತುಂಬಾ ಕೂದಲಿದ್ದರೆ ಮಾತ್ರ ಅಂದವಾಗಿ, ಆಕರ್ಷಕವಾಗಿ ಕಾಣಲು ಸಾಧ್ಯ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. ಹಾಗಾದರೆ ದಪ್ಪ ದಟ್ಟನೆಯ ಕೂದಲು ಬೆಳೆಯಲು ಏನು ಮಾಡಬಹುದು?
ಅಂಗಡಿಗಳಲ್ಲಿ ಸಿಗುವ ಇತರ ಉತ್ಪನ್ನಗಳಿಗಿಂತ ತೆಂಗಿನೆಣ್ಣೆ ಬಳಸುವುದರಿಂದ ಕಪ್ಪಾದ ಉದ್ದನೆಯ ಕೂದಲು ಬೆಳೆಯುತ್ತದೆ. ಸ್ನಾನಕ್ಕೆ ಅರ್ಧ ಗಂಟೆ ಮೊದಲು ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ ಬಳಿಕ ಸ್ನಾನ ಮಾಡಿ. ತಲೆಗೂದಲು ಒಣಗಿದ ಬಳಿಕವೂ ಒಂದು ಚಮಚ ಎಣ್ಣೆಯನ್ನು ಕೂದಲಿಗೆ ಹಚ್ಚಿ ತಿಕ್ಕುವುದರಿಂದ ಕೂದಲಿಗೆ ಹೊಳಪು ಬರುತ್ತದೆ.
ಸೀಳುವ ಕೂದಲಿನ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಕೂದಲಿನ ಬುಡಕ್ಕೇ ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲು ನೀಳವಾಗಿ ಬೆಳೆಯುತ್ತದೆ. ರಾತ್ರಿ ನಡುವೆ ನಿದ್ದೆ ಬರದೆ ತೊಳಲಾಡುತ್ತಿದ್ದರೆ, ಮಲಗುವ ಮುನ್ನ ಒಂದು ಚಮಚ ತೆಂಗಿನೆಣ್ಣೆಯನ್ನು ನೆತ್ತಿಗೆ ಹಾಕಿ ತಿಕ್ಕಿ. ಇದು ತಲೆಗೂ, ದೇಹಕ್ಕೂ ಒಳ್ಳೆಯದು.