ಒಂದು ಜೀನ್ಸ್ ನ ಗರಿಷ್ಠ ಬೆಲೆ ಅಬ್ಬಬ್ಬಾ ಎಂದರೆ ಎಷ್ಟಿರಬಹುದು. 10 ಸಾವಿರ ಅಥವಾ ಲಕ್ಷ ರೂಪಾಯಿಗಳ ಆಸುಪಾಸು ಎಂದು ನೀವು ಅಂದಾಜಿಸಬಹುದು. ಆದರೆ ಇಲ್ಲೊಂದು ಜೀನ್ಸ್ ಅದರಲ್ಲೂ ಹಳೆ ಕಾಲಕ್ಕೆ ಸೇರಿದ್ದ ಜೀನ್ಸ್ ದುಬಾರಿ ಬೆಲೆಗೆ ಹರಾಜಾಗುವ ಮೂಲಕ ಹುಬ್ಬೇರುವಂತೆ ಮಾಡಿದೆ.
ಹೌದು, 1880 ನೇ ಇಸವಿಯ ಬಣ್ಣ ಮಾಸಿದ, ಅಲ್ಲಲ್ಲಿ ಹರಿದು ಹೋಗಿರುವ ಲೆವಿಸ್ ಜೀನ್ಸ್ ಪ್ಯಾಂಟ್ ಬರೋಬ್ಬರಿ 87 ಸಾವಿರ ಡಾಲರ್ ಅಂದರೆ 71 ಲಕ್ಷ ರೂಪಾಯಿಗಳಿಗೆ ಹರಾಜಾಗಿದ್ದು, ಕೇಳಿದವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ವಿಂಟೇಜ್ ಬಟ್ಟೆ ವ್ಯಾಪಾರೀ ಕೈಲ್ ಆರ್ಟ್ನರ್ ಮತ್ತು ಜಿಪ್ ಸ್ಟೀವನ್ ಸನ್ ಎನ್ನುವರು ಅಕ್ಟೋಬರ್ ಒಂದರಂದು ಅಮೇರಿಕಾದ ಸ್ಯಾನ್ ಡಿಯಾಗೋ ದಲ್ಲಿ ನಡೆದ ಹರಾಜಿನಲ್ಲಿ ಈ ದುಬಾರಿ ಮೊತ್ತವನ್ನು ಪಾವತಿಸಿ ಜೀನ್ಸ್ ಪ್ಯಾಂಟನ್ನು ತಮ್ಮದಾಗಿಸಿಕೊಂಡಿದ್ದಾರೆ.