ಕಾಳುಮೆಣಸು ಜ್ವರ ಕೆಮ್ಮಿಗೆ ಔಷಧ, ಅಡುಗೆಗೆ ರುಚಿ ಕೊಡುವುದು ಮಾತ್ರವಲ್ಲ ಇದರಿಂದ ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯೂ ಕಡಿಮೆಯಾಗುತ್ತದೆ.
ನಿಮ್ಮ ಕೂದಲು ಅಕಾಲಿಕವಾಗಿ ನೆರೆದಿದ್ದರೆ ನಿಮ್ಮ ಕೂದಲಿಗೆ ಕಾಳುಮೆಣಸಿನೊಂದಿಗೆ ಮೊಸರನ್ನು ಸೇರಿಸಿ ಪ್ಯಾಕ್ ರೀತಿ ಬಳಸಬಹುದು. ಇದು ಕೂದಲು ಬಿಳಿ ಆಗುವುದನ್ನು ತಪ್ಪಿಸುತ್ತದೆ. ಮೊಸರು ನಿಮ್ಮ ಕೂದಲಿಗೆ ಆದ್ರತೆ ನೀಡಿ ವಿಟಮಿನ್ ಸಿ ಕೊರತೆಯನ್ನು ಪೂರೈಸುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯಲು ನೆರವು ನೀಡುತ್ತದೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.
ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ ಕಂಡು ಬೆಚ್ಚಿಬಿದ್ದ ವೈದ್ಯ
ಒಂದು ಕಪ್ ಮೊಸರಿಗೆ ಎರಡು ಚಿಕ್ಕ ಚಮಚ ಕಾಳುಮೆಣಸಿನ ಪುಡಿ ಹಾಕಿ, ಒಂದು ಚಿಕ್ಕ ಚಮಚ ಜೇನುತುಪ್ಪ ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಕೂದಲು ಪೂರ್ಣವಾಗಿ ಆವರಿಸುವಂತೆ ಹಚ್ಚಿ, ಮೊದಲು ನೆತ್ತಿಯ ಮೇಲೆ ಬಳಿಕ ಕೂದಲ ತುದಿಯವರೆಗೆ ಬರುವಂತೆ ಹಚ್ಚಿ. 30 ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಪುನರಾವರ್ತಿಸಿ. ಕಾಳುಮೆಣಸಿನೊಂದಿಗೆ ಅಲಿವ್ ಆಯಿಲ್ ಅನ್ನು ಹಾಕಿಯೂ ಪ್ರಯತ್ನಿಸಬಹುದು. ವಾರಕ್ಕೆರಡು ಬಾರಿ ಇದನ್ನು ಪುನರಾವರ್ತಿಸಿ. ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.