ಕೂದಲಿನ ಹೊಟ್ಟು ಹೋಗಲಾಡಿಸಲು ಎಲ್ಲಾ ಬಗೆಯ ಶ್ಯಾಂಪುಗಳನ್ನು ಬಳಸಿ ಸೋತು ಹೋಗಿದ್ದೀರಾ…? ಕೂದಲು ಉದುರಿ ಉದುರಿ ತಲೆ ಬೋಳಾಗುವ ಭಯ ಕಾಡುತ್ತಿದೆಯೇ…? ಹಾಗಿದ್ದರೆ ಇಲ್ಲಿ ಕೇಳಿ ನಿಮ್ಮೆಲ್ಲಾ ಸಮಸ್ಯೆಗಳನ್ನು ಮೊಸರು ಸರಿಮಾಡಬಲ್ಲುದು.
ಒಂದು ಕಪ್ ಮೊಸರಿಗೆ ಮೆಂತೆ ಪುಡಿ, ನಿಂಬೆ ರಸ ಬೆರೆಸಿ ಗಟ್ಟಿಯಾದ ಪೇಸ್ಟ್ ತಯಾರಿಸಿ. ಇದನ್ನು ತಲೆಯ ಬುಡದಿಂದ ಕೂದಲಿನ ತುದಿಯ ತನಕ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯುವುದರಿಂದ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.
ಹೇರ್ ಕಂಡಿಷನರ್ ಆಗಿಯೂ ಮೊಸರನ್ನು ಬಳಸಬಹುದು. ಇದಕ್ಕೆ ಒಂದು ಚಮಚ ಆಲಿವ್ ಆಯಿಲ್ ಬೆರೆಸಿ ನಿಂಬೆರಸ ಸೇರಿಸಿ. ಇದನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ ನಿಮ್ಮ ತಲೆ ಕೂದಲನ್ನು ಅದರಲ್ಲಿ ನೆನೆಸಿಡಿ. ಅರ್ಧ ಗಂಟೆ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಮೊಸರು ಹಾಕಿ ತಲೆ ಕೂದಲು ವಾಸನೆ ಬರುತ್ತಿದ್ದರೆ ಬೆಚ್ಚಗಿನ ನೀರಿಗೆ ನಿಂಬೆ ರಸ ಹಿಂಡಿ ಮತ್ತೆ ತಲೆ ತೊಳೆಯಿರಿ. ಇದರಿಂದ ಮೊಸರಿನ ಅಡ್ಡ ವಾಸನೆ ದೂರವಾಗುತ್ತದೆ.