alex Certify ತಲೆನೋವಿನ ಸಮಸ್ಯೆ ಹೆಚ್ಚಿಸುತ್ತಿದೆ ಒತ್ತಡ, ಅಪಾಯದಲ್ಲಿದ್ದಾರೆ ಯುವಜನತೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆನೋವಿನ ಸಮಸ್ಯೆ ಹೆಚ್ಚಿಸುತ್ತಿದೆ ಒತ್ತಡ, ಅಪಾಯದಲ್ಲಿದ್ದಾರೆ ಯುವಜನತೆ…..!

ಭಾರತದಲ್ಲಿ ತಲೆನೋವಿನ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಕರೋನಾ ಸಾಂಕ್ರಾಮಿಕ ಜನರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಒತ್ತಡ ಮತ್ತು ಆತಂಕಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ವರದಿಯ ಪ್ರಕಾರ, ಭಾರತವು ಕರೋನಾದಿಂದ ಸಾಕಷ್ಟು ಪ್ರಭಾವಿತವಾಗಿದೆ. ತಲೆನೋವು ನೇರವಾಗಿ ಒತ್ತಡದ ಮಟ್ಟಕ್ಕೆ ಸಂಬಂಧಿಸಿದ್ದು. ದೇಶದ ಪ್ರಮುಖ ಔಷಧೀಯ ಕಂಪನಿಯೊಂದು ತಲೆನೋವಿನ ಬಗ್ಗೆ ಸಂಶೋಧನೆ ನಡೆಸಿದೆ.

20 ನಗರಗಳ 22 ರಿಂದ 45 ವರ್ಷ ವಯಸ್ಸಿನ 5,310 ಕ್ಕೂ ಹೆಚ್ಚು ಜನರನ್ನು ಸಂದರ್ಶಿಸಲಾಗಿದೆ. ಕರೋನಾ ನಂತರ ತಲೆನೋವಿನ ಸಮಸ್ಯೆ ಶೇ.93 ರಷ್ಟು ಹೆಚ್ಚಾಗಿದೆ. ಒತ್ತಡದಿಂದಾಗಿ ಜನರು ತಲೆನೋವು ಅನುಭವಿಸುತ್ತಿದ್ದಾರೆ. ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದ ಪ್ರತಿ ಮೂವರಲ್ಲಿ ಒಬ್ಬರು ಕೋವಿಡ್‌ ನಂತರ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ.

ಒತ್ತಡಕ್ಕೆ ಕಾರಣವೇನು?

ಉದ್ಯೋಗ ಮಾಡುವವರು ಮತ್ತು ಮಾಡದಿರುವವರು ಇಬ್ಬರನ್ನೂ ಸಂಶೋಧನೆಗೆ ಒಳಪಡಿಸಲಾಗಿದೆ. ಎಲ್ಲರಲ್ಲೂ ಒತ್ತಡ, ಆರ್ಥಿಕ ಸಮಸ್ಯೆಗಳು ಮತ್ತು ಕೆಲಸದ ಆತಂಕ ಇವೆಲ್ಲವೂ ಕಂಡುಬಂದಿದೆ. ಪರಿಣಾಮ ಇವರು ತಲೆನೋವಿನಿಂದ ಬಳಲಿದ್ದಾರೆ. ಇದಲ್ಲದೇ ಆರೋಗ್ಯ ಸಮಸ್ಯೆ, ಕೌಟುಂಬಿಕ ಕಲಹಗಳೂ ಇದಕ್ಕೆ ಕಾರಣ. 26-35 ಮತ್ತು 36-45 ವರ್ಷ ವಯಸ್ಸಿನವರಲ್ಲಿ ತಲೆ ನೋವಿನ ಸಮಸ್ಯೆ ಹೆಚ್ಚಾಗಿದೆ.

26-35 ವರ್ಷ ವಯಸ್ಸಿನ ಯುವಕರು ಹೆಚ್ಚು ಒತ್ತಡದಲ್ಲಿರುವುದು ಕಂಡುಬಂದಿದೆ. ತಲೆನೋವು ಒಮ್ಮೆ ಶುರುವಾದರೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸುಮಾರು 40 ಪ್ರತಿಶತದಷ್ಟು ಜನರು ಕೆಲಸದ ಮೇಲೆ ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ತಲೆನೋವು ವೃತ್ತಿಪರ ಜೀವನ ಮಾತ್ರವಲ್ಲದೆ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತದೆ.

ತಲೆನೋವಿಗೆ ಒತ್ತಡ ಕಾರಣ!

ಕುತ್ತಿಗೆ ಮತ್ತು ನೆತ್ತಿಯ ಸ್ನಾಯುಗಳು ಉದ್ವಿಗ್ನಗೊಂಡಾಗ ಅಥವಾ ಸಂಕುಚಿತಗೊಂಡಾಗ ತಲೆನೋವು ಸಂಭವಿಸುತ್ತದೆ. ಸ್ನಾಯು ಸಂಕೋಚನಗಳು ಒತ್ತಡ, ಖಿನ್ನತೆ, ತಲೆ ಗಾಯ ಅಥವಾ ಆತಂಕದಿಂದ ಉಂಟಾಗಬಹುದು.

ತಲೆನೋವು ತಪ್ಪಿಸಲು ಮಾರ್ಗಗಳು

ನಿಯಮಿತ ಸಮಯದಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸಿ. ಯಾವುದೇ ಸಮಯದಲ್ಲಿ ಆಹಾರವನ್ನು ಬಿಟ್ಟುಬಿಡಬೇಡಿ, ಖಾಲಿ ಹೊಟ್ಟೆಯು ಗ್ಯಾಸ್ಟ್ರಿಕ್‌ಗೆ ಕಾರಣವಾಗಬಹುದು. ಬೆಳಗಿನ ಉಪಾಹಾರವನ್ನು ಸೇವಿಸಿ. ಪ್ರತಿದಿನ ವ್ಯಾಯಾಮ ಮಾಡಿ, ಸಾಕಷ್ಟು ನಿದ್ರೆ ಮಾಡುವುದು ಅವಶ್ಯಕ. ಕೆಫೀನ್ ಮತ್ತು ಧೂಮಪಾನವನ್ನು ತಪ್ಪಿಸಿ. ವೈದ್ಯರನ್ನು ಕೇಳದೆ ನೋವಿನ ಔಷಧಿಯನ್ನು ತೆಗೆದುಕೊಳ್ಳಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...