ವಿಪರೀತ ಕೆಲಸದೊತ್ತಡ, ಧಾವಂತದ ಬದುಕು ಅನಿರೀಕ್ಷಿತ ತಲೆನೋವನ್ನು ತಂದಿಡುತ್ತದೆ. ಮನೆ ಮದ್ದುಗಳ ಮೂಲಕ ತಲೆ ನೋವಿನ ಪ್ರಮಾಣವನ್ನು ಕೊಂಚ ಕಡಿಮೆ ಮಾಡಿಕೊಳ್ಳಬಹುದು. ಜಾಕಾಯಿ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಅದನ್ನು ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಕೊಬ್ಬರಿ ಎಣ್ಣೆಗೆ ಲವಂಗದ ಎಣ್ಣೆ ಮಿಶ್ರಣ ಮಾಡಿ ಹಣೆಗೆ ನಿಧಾನವಾಗಿ ಉಜ್ಜುವುದರಿಂದ ತಲೆ ನೋವು ಕಡಿಮೆಯಾಗುತ್ತದೆ.
ವಿಪರೀತವಾಗಿ ತಲೆ ನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ಹಣೆಗೆ ಲೇಪಿಸಿ, ನಿದ್ದೆ ಮಾಡಿ. ಇದರಿಂದ ತಲೆ ನೋವು ಮಾಯವಾಗುತ್ತದೆ. ಪಾಲಕ್ ಸೊಪ್ಪಿನ ರಸ ಮತ್ತು ಕ್ಯಾರೆಟ್ ರಸ ಬೆರೆಸಿ ಕುಡಿದರೆ ಮೈಗ್ರೇನ್ ತಲೆ ನೋವು ಕಡಿಮೆಯಾಗುತ್ತದೆ.
ಶುಂಠಿ, ತಲೆ ನೋವನ್ನು ನಿವಾರಿಸುತ್ತದೆ. ದಿನವೂ ಎರಡರಿಂದ ಮೂರು ಬಾರಿ ಎರಡು ಚಮಚ ಶುಂಠಿ ರಸ ಮತ್ತು ಎರಡು ಚಮಚ ನಿಂಬೆರಸವನ್ನು ಮಿಶ್ರಣ ಮಾಡಿ ಕುಡಿದರೆ ತಲೆನೋವು ಕಡಿಮೆಯಾಗುತ್ತದೆ.
ಉರಿಯೂತಗಳಿಂದ ಉಂಟಾಗುವ ತಲೆ ನೋವನ್ನು ಐಸ್ ಪ್ಯಾಕ್ ಕಡಿಮೆ ಮಾಡುತ್ತದೆ. ಐಸ್ ನೀರಲ್ಲಿ ಅದ್ದಿದ ಟವೆಲ್ ನ್ನು ತಲೆಗೆ ಹಾಕಿಕೊಂಡರೆ ಆರಾಮ ಎನಿಸುತ್ತದೆ. ತುಳಸಿ ಎಲೆ ರಸವನ್ನು ಶ್ರೀಗಂಧದ ಪುಡಿ ಜೊತೆ ಕಲಸಿ ಹಣೆಗೆ ಲೇಪಿಸುವುದರಿಂದ ತಲೆ ನೋವು ಶಮನವಾಗುತ್ತದೆ.