ದಿನವಿಡೀ ತಲೆನೋವು ನಿಮಗೂ ಕಾಣಿಸಿಕೊಳ್ಳುತ್ತದೆಯೇ. ಇದಕ್ಕೆ ಪೌಷ್ಟಿಕಾಂಶದ ಕೊರತೆ, ನರದೌರ್ಬಲ್ಯ ಮೊದಲಾದ ಕಾರಣಗಳ ಹೊರತಾಗಿ ನೀವು ಸೇವಿಸುವ ಆಹಾರವೂ ಕಾರಣವಾಗಬಹುದು.
ನಿತ್ಯ ವೈನ್ ಮತ್ತು ಮದ್ಯಪಾನ ಸೇವಿಸುವವರಲ್ಲಿ ಈ ತಲೆನೋವು ಕಟ್ಟಿಟ್ಟ ಬುತ್ತಿ. ಇವುಗಳಲ್ಲಿರುವ ಸಲ್ಫೈಟ್ ಎಂಬ ಅಂಶ ಮೈಗ್ರೇನ್ ತಲೆ ನೋವಿಗೆ ಕಾರಣವಾಗುತ್ತದೆ.
ವಿಪರೀತ ಬಾಯಾರಿಕೆ ಎಂಬ ಕಾರಣಕ್ಕೆ ಸೋಡಾ ಅಥವಾ ಗ್ಯಾಸ್ ತುಂಬಿದ ಇತರ ಯಾವುದೇ ತಂಪು ಪಾನೀಯ ಸೇವಿಸಿದರೂ ಅಷ್ಟೇ ಆ ಬಳಿಕ ನಿಮ್ಮನ್ನು ತಲೆನೋವು ಬಿಡದೆ ಕಾಡುತ್ತದೆ. ಅದರೊಂದಿಗೆ ತಲೆ ತಿರುಗುವುದು, ವಾಕರಿಕೆ ಲಕ್ಷಣಗಳೂ ಸೇರಿಕೊಳ್ಳುವುದುಂಟು.
ಹಸಿ ಮಾಂಸವನ್ನು ದೀರ್ಘಕಾಲ ಫ್ರೆಶ್ ಆಗಿಡಲು ನೈಟ್ರೇಟ್ ಬಳಸುತ್ತಾರೆ. ಈ ಮಾಂಸಗಳ ಸೇವನೆಯಿಂದಲೂ ಕೆಲವರಿಗೆ ತಲೆನೋವು ಬರಬಹುದು. ಫಾಸ್ಟ್ ಫುಡ್ ಗಳ ತಯಾರಿಯಲ್ಲಿ ಹೆಚ್ಚಾಗಿ ಬಳಸುವ ಸೋಯಾ ಸಾಸ್, ಚಿಪ್ಸ್, ಬಹುದಿನಗಳ ಬಳಿಕ ಬಳಸುವ ಚೀಸ್ ಕೂಡಾ ಕೆಲವರಿಗೆ ತಲೆನೋವು ತಂದುಕೊಡಬಹುದು.
ಹೆಚ್ಚು ಹೊತ್ತು ಚೂಯಿಂಗ್ ಗಮ್ ಜಗಿಯುವುದರಿಂದ ತಲೆನೋವು ಕಾಣಿಸಿಕೊಳ್ಳಬಹುದು. ಹೆಚ್ಚು ಜಗಿಯುವುದರಿಂದ ಸ್ನಾಯುಗಳ ಸಂಕೋಚದಿಂದ ತಲೆನೋವು ಉಂಟಾಗಬಹುದು ಎನ್ನುತ್ತವೆ ಅಧ್ಯಯನಗಳು.