
ಯಾವುದೇ ವಸ್ತುವನ್ನು ವೀಕ್ಷಿಸಲು ಜನರು ಹಾಗೂ ಪ್ರಾಣಿಗಳು ತಮ್ಮ ಕಣ್ಣುಗಳನ್ನು ಸರಳವಾಗಿ ಚಲಿಸುವಂತೆ ಮಾಡಬಹುದು. ಅದೇ ಗೂಬೆಗಳು ತಮ್ಮ ತಲೆಯನ್ನು ತಿರುಗಿಸುತ್ತವೆ. ಈ ಪಕ್ಷಿಗಳು ಸ್ಥಿರವಾದ ಕಣ್ಣಿನ ಸಾಕೆಟ್ಗಳನ್ನು ಹೊಂದಿವೆ. ಅಂದರೆ, ಅದರ ಕಣ್ಣುಗುಡ್ಡೆಗಳು ತಿರುಗಲು ಸಾಧ್ಯವಿಲ್ಲ. ಅವುಗಳು ಕುತ್ತಿಗೆಯನ್ನು ಹಿಗ್ಗಿಸುತ್ತದೆ. ಒಂದು ವೇಳೆ ಜನರು ಗೂಬೆಗಳಂತೆ ತಮ್ಮ ತಲೆ ತಿರುಗಿಸಿದರೆ ರಕ್ತಸ್ರಾವ ಉಂಟಾಗಬಹುದು.
ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ, ಗೂಬೆಯು ತನ್ನ ಕುತ್ತಿಗೆಯನ್ನು ಎಷ್ಟು ಸಾಧ್ಯವೋ ಅಷ್ಟು ದೂರ ತಿರುಗಿಸುವುದನ್ನು ಮತ್ತು ಅದರ ಹಳದಿ ಕಣ್ಣುಗಳನ್ನು ಅಗಲವಾಗಿ ತೆರೆದುಕೊಂಡು ಕ್ಯಾಮರಾವನ್ನು ತಲೆಕೆಳಗಾಗಿ ನೋಡುವುದನ್ನು ಕಾಣಬಹುದು. ಈ ವಿಡಿಯೋವನ್ನು ಅಮೇಜಿಂಗ್ ನೇಚರ್ ಎಂಬ ಟ್ವಿಟ್ಟರ್ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ.
ವಿಡಿಯೋದಲ್ಲಿ ಕಂಡುಬರುವ ಗೂಬೆಯನ್ನು ಹಿಮ ಗೂಬೆ ಎಂದು ಕರೆಯಲಾಗುತ್ತದೆ. ಹಿಮ ಗೂಬೆಗಳ ಮೇಲೆ ಕಪ್ಪು ಅಥವಾ ಕಂದು ಬಣ್ಣದ ವಿವಿಧ ಪ್ರಮಾಣದ ಗುರುತುಗಳೊಂದಿಗೆ ಶುದ್ಧ ಬಿಳಿ ಬಣ್ಣವನ್ನ ಅವು ಹೊಂದಿರುತ್ತವೆ. ಅವುಗಳು ಉತ್ತರ ಧ್ರುವದ ಸುತ್ತಲು ವಾಸಿಸುತ್ತವೆ.
ಅವುಗಳ ಕಣ್ಣುಗಳು ಮತ್ತು ವಿಚಿತ್ರ ಧ್ವನಿಯಿಂದಾಗಿ ಗೂಬೆಗಳು ಸಾಮಾನ್ಯವಾಗಿ ಭಯಾನಕ ಚಲನಚಿತ್ರಗಳಲ್ಲಿ ಕಂಡುಬರುತ್ತವೆ. ವಿಡಿಯೋ ನೋಡಿದ ನೆಟ್ಟಿಗರು ಗೂಬೆ ಕಂಡು ಭೀತಿ ಉಂಟಾಯಿತೆಂದು ತಿಳಿಸಿದ್ದಾರೆ.