ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸುಸ್ಥಿತಿಯಲ್ಲಿರುವ ನೂರು ಹಳೆ ಬಸ್ಸುಗಳನ್ನು ತಲಾ ಒಂದು ಲಕ್ಷ ರೂಪಾಯಿಗಳಂತೆ ಮಾರಾಟ ಮಾಡಲು ಮುಂದಾಗಿದೆ. ವಾಯುವ್ಯ ಸಾರಿಗೆ ನಿಗಮ ಈ ಬಸ್ ಗಳನ್ನು ಖರೀದಿ ಮಾಡುತ್ತಿದ್ದು, ಇದಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
8.5 ಲಕ್ಷದಿಂದ 9.5 ಲಕ್ಷ ಕಿಲೋಮೀಟರ್ ಕ್ರಮಿಸಿರುವ ಬಸ್ಸುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಈಗಾಗಲೇ 30 ಬಸ್ಸುಗಳನ್ನು ವಾಯುವ್ಯ ಸಾರಿಗೆ ನಿಗಮಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೇಳಲಾಗಿದೆ.
ಈ ಬಸ್ ಗಳು ಸುಸ್ಥಿತಿಯಲ್ಲಿದ್ದು ಪ್ರಯಾಣಿಕರನ್ನು ಕರೆದೊಯ್ಯಲು ಯೋಗ್ಯವಾಗಿವೆ ಎನ್ನಲಾಗಿದೆ. ಆದರೂ, ಬಸ್ಸುಗಳನ್ನು ಪಡೆದುಕೊಳ್ಳುವ ಮುನ್ನ ವಾಯುವ್ಯ ಸಾರಿಗೆ ನಿಗಮದ ತಾಂತ್ರಿಕ ಸಿಬ್ಬಂದಿ ಇವುಗಳನ್ನು ಪರಿಶೀಲಿಸಿ ಕಾರ್ಯಕ್ಷಮತೆ ಕುರಿತು ಪ್ರಮಾಣ ಪತ್ರ ಪಡೆಯಲಿದ್ದಾರೆ.