
ರಾಜ್ಯದಾದ್ಯಂತ ಮಳೆ ತನ್ನ ಆರ್ಭಟ ಮುಂದುವರಿಸಿದ್ದು, ಅನೇಕ ಕಡೆ ಮನೆಗಳು ಕುಸಿದಿವೆ. ಹೊಲ – ಗದ್ದೆಗಳಿಗೆ ನೀರು ನುಗ್ಗಿರುವ ಪರಿಣಾಮ ಬೆಳೆಗಳಿಗೂ ಹಾನಿಯಾಗಿದೆ.
ಈ ಅನಾಹುತಗಳ ಮಧ್ಯೆ ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಮಾದನ ಹಿಪ್ಪರಗಿಯಲ್ಲಿ ಅವಘಡ ಒಂದು ಸಂಭವಿಸಿದೆ.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪಿಯು ತರಗತಿ ನಡೆಯುತ್ತಿದ್ದ ವೇಳೆ ಚಾವಣಿ ಕುಸಿದಿದ್ದು, ಇದರ ಪರಿಣಾಮ ಮೂವರು ವಿದ್ಯಾರ್ಥಿನಿಯರಿಗೆ ಗಾಯವಾಗಿದೆ.
ಈ ಪೈಕಿ ನಿಕಿತಾ ಬಾಬುರಾವ ನಿಂಗದಳ್ಳಿ ಎಂಬ ವಿದ್ಯಾರ್ಥಿನಿ ತಲೆಗೆ ತೀವ್ರ ಏಟು ಬಿದ್ದಿರುವ ಕಾರಣ ಆಸ್ಪತ್ರೆಯಲ್ಲಿ ಹೊಲಿಗೆ ಹಾಕಲಾಗಿದೆ.