ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ತಮ್ಮ ವೈಯಕ್ತಿಕ ವಿಚಾರಕ್ಕೆ ಆಗಾಗ ಇಂಟರ್ನೆಟ್‌ನಲ್ಲಿ ಸುದ್ದಿ ಮಾಡ್ತಾನೇ ಇರ್ತಾರೆ. ಜಾಲತಾಣಗಳಲ್ಲಿ ಖುಲ್ಲಂಖುಲ್ಲ ಆಗಿ ಮಾತನಾಡ್ತಾರೆ ಈ ಉದ್ಯಮಿ.
ಇದೀಗ ಗೂಗಲ್ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್ ಅವರ ಪತ್ನಿ ನಿಕೋಲ್ ಶಾನಹಾನ್ ಅವರ ಜೊತೆ ಎಲೋನ್ ಮಸ್ಕ್‌ಗೆ ಸಂಬಂಧವಿದೆ ಅನ್ನೋ ಸುದ್ದಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗ್ತಾ ಇದೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಎಲೋನ್ ಮಸ್ಕ್, ತಮ್ಮ ಲೈಂಗಿಕ ಜೀವನದ ರಹಸ್ಯವನ್ನೇ ಬಹಿರಂಗಪಡಿಸಿದ್ದಾರೆ.
ನಿಕೋಲ್ ಜೊತೆ ಅಫೇರ್ ಇಲ್ಲ ಎಂದಿರೋ ಮಸ್ಕ್, ಕಳೆದ ಮೂರು ವರ್ಷಗಳಲ್ಲಿ ನಾವಿಬ್ಬರು ಕೇವಲ 2 ಬಾರಿ ಮಾತ್ರ ಭೇಟಿಯಾಗಿದ್ದೇವೆ ಅಂತಾ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ ನಿನ್ನೆಯಷ್ಟೆ ಪಾರ್ಟಿಯೊಂದರಲ್ಲಿ ಆಕೆಯನ್ನು ಭೇಟಿಯಾಗಿದ್ದು ನಿಜ, ಆದ್ರೆ ನಮ್ಮ ಸುತ್ತ ಸಾಕಷ್ಟು ಜನರಿದ್ರು. ರೊಮ್ಯಾಂಟಿಕ್ ಆಗಿ ಏನೂ ನಡೆಯಲಿಲ್ಲ ಅಂತಾ ಗಾಸಿಪ್‌ಗಳಿಗೆಲ್ಲ ಬಿಂದಾಸ್ ಆಗಿ ಫುಲ್ ಸ್ಟಾಪ್ ಇಟ್ಟಿದ್ದಾರೆ ಎಲೋನ್ ಮಸ್ಕ್.
ಇದೀಗ ತನ್ನ ಪತ್ನಿ ಮತ್ತು ಎಲೋನ್ ಮಸ್ಕ್ ಸಂಬಂಧದ ಬಗ್ಗೆ ತಿಳಿದುಕೊಂಡು ಸೆರ್ಗೆಯ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ವರದಿಯೊಂದು ಬಹಿರಂಗಪಡಿಸಿದೆ. ಇನ್ನೊಂದೆಡೆ ನಿಕೋಲ್ ಈಗಾಗ್ಲೇ ಪತಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಎಲೋನ್ ಮಸ್ಕ್ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿರೋ ಟ್ವಿಟರ್ ಬಳಕೆದಾರರು, ಇಬ್ಬರ ಮಧ್ಯೆ ಅಫೇರ್ ಇಲ್ಲ ಅನ್ನೋ ವಿಚಾರ ಕೇಳಲು ಸಂತೋಷವಾಗ್ತಿದೆ ಎಂದು ಕಾಮೆಂಟ್ ಮಾಡಿದ್ದರು.
ಇದಕ್ಕೆ ಉತ್ತರಿಸಿದ ಎಲೋನ್ ಮಸ್ಕ್, ‘ನಾನು ಬಹಳ ದಿನಗಳಿಂದ ಸೆಕ್ಸ್ ಕೂಡ ಮಾಡಿಲ್ಲ’ ಎಂದು ಬರೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಮತ್ತು ಎಲೋನ್ ಮಸ್ಕ್ ದೀರ್ಘಕಾಲದಿಂದ ಸ್ನೇಹಿತರಾಗಿದ್ದರು. ಆದರೆ ಎಲೋನ್ ಮಸ್ಕ್ ಹಾಗೂ ನಿಕೋಲ್ ಶಾನಹಾನ್ ಸಂಬಂಧದಿಂದಾಗಿ ಅವರ ಸ್ನೇಹ ಮುರಿದುಬಿದ್ದಿದೆಯಂತೆ. ಇನ್ನೇನು ಮುಳುಗುವ ಹಂತದಲ್ಲಿದ್ದ ಎಲೋನ್ ಮಸ್ಕ್ ಕಂಪನಿಯನ್ನು ಬ್ರಿನ್ 2008 ರಲ್ಲಿ ರಕ್ಷಿಸಿದ್ದರು. ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ಟೆಸ್ಲಾ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು.