ನವದೆಹಲಿ: ವಿಶ್ವದ ಅತಿ ದೊಡ್ಡ ಶ್ರೀಮಂತ ಪಟ್ಟಿ ಕಂಪೈಲರ್ ಆಗಿರುವ ಹುರುನ್ ಇಂಡಿಯಾ ವೆಲ್ತ್ ವರದಿ 2021ರ ಎರಡನೇ ಆವೃತ್ತಿಯನ್ನು ಪ್ರಕಟಿಸಿದೆ. 50ಕ್ಕೂ ಹೆಚ್ಚು ಡೇಟಾ ಪಾಯಿಂಟ್ಗಳೊಂದಿಗೆ ಸಮೀಕ್ಷೆ ಮಾಡಲಾಗಿದ್ದು, ಇದು ಭಾರತೀಯ ಮಿಲಿಯನೇರ್ ಬ್ರ್ಯಾಂಡ್ ಆಯ್ಕೆಗಳು, ಬಳಕೆಯ ಅಭ್ಯಾಸಗಳು ಮತ್ತು ಜೀವನಶೈಲಿಯ ಪ್ರವೃತ್ತಿಗಳ ಕುರಿತು ಒಳನೋಟಗಳನ್ನು ಒದಗಿಸುತ್ತದೆ.
ಹುರುನ್ ಇಂಡಿಯಾ ವೆಲ್ತ್ (ಸಂಪತ್ತು) ವರದಿ 2021ರ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ ಶೇ.70ರಷ್ಟು ಮಿಲಿಯನೇರ್ ಗಳು ತಮ್ಮ ಮಕ್ಕಳನ್ನು ಓದಲು ವಿದೇಶಕ್ಕೆ ಕಳುಹಿಸಲು ಬಯಸುತ್ತಾರೆ. ವಿದೇಶದಲ್ಲಿ ತಮ್ಮ ಮಕ್ಕಳ ಶಿಕ್ಷಣಕ್ಕೆ ಬಂದಾಗ, ಸಿರಿವಂತರು ಅಮೆರಿಕಾ ದೇಶಕ್ಕೆ (ಶೇ.29), ಯುನೈಟೆಡ್ ಕಿಂಗ್ಡಮ್ ( ಶೇ.19), ನ್ಯೂಜಿಲೆಂಡ್ (ಶೇ.12) ಮತ್ತು ಜರ್ಮನಿ (ಶೇ.11) ಗೆ ಆದ್ಯತೆ ನೀಡುತ್ತದೆ.
ಇನ್ನು ವಾಚ್ ಸಂಗ್ರಹಿಸುವುದು ಅತ್ಯಂತ ಜನಪ್ರಿಯ ಹವ್ಯಾಸವಾಗಿದೆ. ಸಮೀಕ್ಷೆ ನಡೆಸಿದ ಶೇ.62ರಷ್ಟು ಜನರು ನಾಲ್ಕು ಕೈಗಡಿಯಾರಗಳನ್ನು ಹೊಂದಿದ್ದಾರೆ. ಸಮೀಕ್ಷೆ ನಡೆಸಿದವರಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರು ಮೂರು ವರ್ಷಗಳೊಳಗೆ ಕಾರುಗಳನ್ನು ಬದಲಾಯಿಸಿದ್ದಾರೆ. ಮರ್ಸಿಡೆಸ್ ಬೆನ್ಜ್ ಅತ್ಯಂತ ಜನಪ್ರಿಯ ಐಷಾರಾಮಿ ಕಾರು ಬ್ರಾಂಡ್ ಆಗಿದ್ದು, ನಂತರ ರೋಲ್ಸ್ ರಾಯ್ಸ್ ಹಾಗೂ ರೇಂಜ್ ರೋವರ್, ಲಂಬೋರ್ಗಿನಿ ಅತ್ಯಂತ ಜನಪ್ರಿಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಹುರುನ್ ರಿಸರ್ಚ್ ಇನ್ಸ್ಟಿಟ್ಯೂಟ್ 350 ಭಾರತೀಯ ಮಿಲಿಯನೇರ್ಗಳನ್ನು ಸಮೀಕ್ಷೆಗೆ ಒಳಪಡಿಸಿದ್ದು, ಒಂದು ಮಿಲಿಯನ್ ಯುಎಸ್ ಡಾಲರ್ (ಸುಮಾರು 7 ಕೋಟಿ ರೂ.) ವೈಯಕ್ತಿಕ ಸಂಪತ್ತು ಹೊಂದಿರುವವರು ಎಂದು ವ್ಯಾಖ್ಯಾನಿಸಲಾಗಿದೆ. ಅವರಲ್ಲಿ 42 ಅತಿ ಶ್ರೀಮಂತರು (ಶೇ.12) 100 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳು ಎಂದು ವ್ಯಾಖ್ಯಾನಿಸಲಾಗಿದೆ. ಅವರ ಸರಾಸರಿ ಸಂಪತ್ತು 6.7 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಅವರ ಸರಾಸರಿ ವಯಸ್ಸು 35 ವರ್ಷಗಳು.