ಮೈಸೂರು: ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇನ್ನು ನಾಲ್ಕೈದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಕೂಡ ರಾಜ್ಯದ ಹಲವು ಭಾಗದಲ್ಲಿ ಮಳೆಯಾಗುತ್ತಿದೆ. ವಿಶೇಷ ಅಂದರೆ ಈ ಮಳೆಯಿಂದಾಗಿ ತಮಿಳುನಾಡಿಗೆ ದಾಖಲೆ ಮಟ್ಟದಲ್ಲಿ ನೀರು ಹರಿಯುತ್ತಿದೆಯಂತೆ.
ಹೌದು, ರಾಜ್ಯ ಸರ್ಕಾರ ಈ ಬಾರಿ ತಮಿಳುನಾಡು ರಾಜ್ಯಕ್ಕೆ ಅತೀ ಹೆಚ್ಚು ನೀರನ್ನು ಬಿಡುಗಡೆ ಮಾಡಿದ್ದು, ಇದು ಕಳೆದ 48 ವರ್ಷಗಳಲ್ಲೇ ಅತೀ ಹೆಚ್ಚು ನೀರು ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ವರ್ಷ ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ತಮಿಳುನಾಡಿಗೆ ಒಟ್ಟು 452.5 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆಯಂತೆ. ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ, ರಾಜ್ಯ ತಮಿಳುನಾಡಿಗೆ 101 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಬೇಕು. ಆದರೆ ಮಳೆಯಿಂದ ಹೆಚ್ಚು ನೀರು ಆ ರಾಜ್ಯಕ್ಕೆ ಹರಿದು ಹೋಗಿದೆ.
ಇನ್ನು, ಕಳೆದ ನಾಲ್ಕು ವರ್ಷಗಳಲ್ಲಿ ತಮಿಳುನಾಡಿಗೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗಿದೆ. ಕಳೆದ ಐದಾರು ವರ್ಷಗಳ ಹಿಂದೆ ಕಾವೇರಿ ನೀರಿಗಾಗಿ ದೊಡ್ಡ ಮಟ್ಟದ ಹೋರಾಟಗಳೇ ನಡೆದಿವೆ. ಇದೀಗ ಮಳೆ ಹೆಚ್ಚಾಗಿರೋದ್ರಿಂದ ದಾಖಲೆ ಮಟ್ಟದಲ್ಲಿ ನೀರು ತಮಿಳುನಾಡಿಗೆ ಹರಿದಿದೆ.