ಬಾಲಿವುಡ್‌ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಖಿ ಇತ್ತೀಚೆಗಷ್ಟೇ ಬುಡಕಟ್ಟು ಜನಾಂಗದ ಧಿರಿಸಿನ ಬಗ್ಗೆ ಗೇಲಿ ಮಾಡಿದ್ದರು. ಇದೀಗ ಜಾರ್ಖಂಡ್‌ನ ಪ್ರಮುಖ ಆದಿವಾಸಿ ಸಂಘಟನೆ ಸೆಂಟ್ರಲ್ ಸರ್ನಾ ಸಮಿತಿ, ರಾಂಚಿಯ ಎಸ್‌ಸಿ-ಎಸ್‌ಟಿ ಪೊಲೀಸ್ ಠಾಣೆಯಲ್ಲಿ ರಾಖಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
‘ರಾಖಿ ಸಾವಂತ್, ಅಶ್ಲೀಲ ಉಡುಪಿನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾರೆ. ಅದನ್ನು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಬುಡಕಟ್ಟು ಉಡುಗೆ ಎಂದು ಬಣ್ಣಿಸಿದ್ದಾರೆ. ಇದು ಆದಿವಾಸಿಗಳ ಸಂಸ್ಕೃತಿಯನ್ನು ಕೆಣಕುವ ಯೋಜಿತ ಸಂಚುʼ ಎಂದು ದೂರಿನಲ್ಲಿ ಸಮಿತಿ ಹೇಳಿದೆ.
ಕೇಂದ್ರ ಸರ್ನಾ ಸಮಿತಿಯ ಅಧ್ಯಕ್ಷ ಅಜಯ್ ಟಿರ್ಕಿ ಮಾತನಾಡಿ, ‘ಬುಡಕಟ್ಟು ಸಮಾಜ ತನ್ನದೇ ಆದ ಗೌರವಾನ್ವಿತ ಸಂಪ್ರದಾಯಗಳನ್ನು ಹೊಂದಿದೆ. ರಾಖಿ ಸಾವಂತ್, ಬೆಲ್ಲಿ ಡ್ಯಾನ್ಸ್‌ಗಾಗಿ ಅಶ್ಲೀಲ ಉಡುಗೆ ಧರಿಸಿ ಬುಡಕಟ್ಟು ಜನಾಂಗದವರ ಉಡುಪು ಎಂದು ಬಿಂಬಿಸಿರುವುದು ತಪ್ಪು. ಇದು ಬುಡಕಟ್ಟು ಸಮುದಾಯಕ್ಕೆ ಮಾಡಿದ ಅವಮಾನ ಎಂದಿದ್ದಾರೆ. ರಾಖಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸರ್ನಾ ಸಮಿತಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರವನ್ನೂ ಬರೆಯಲಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರನ್ನು ಕೂಡ ಭೇಟಿ ಮಾಡಿ, ಬುಡಕಟ್ಟು ಸಮಾಜದ ವಿರುದ್ಧ ಇಂತಹ ಅಪಪ್ರಚಾರ ನಿಲ್ಲಿಸುವಂತೆ ಒತ್ತಾಯಿಸುತ್ತೇವೆ ಎಂದು ಅಜಯ್ ಟಿರ್ಕಿ ಹೇಳಿದ್ದಾರೆ. ಜಾರ್ಖಂಡ್‌ನ ಬುಡಕಟ್ಟು ಸಮಾಜ ರಾಜ್ಯದಲ್ಲಿ ರಾಖಿ ಸಾವಂತ್ ಅವರ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
https://www.instagram.com/reel/CcU3Y2zu2tu/?utm_source=ig_embed&ig_rid=af9725dc-10c9-4ad1-b870-4d7ea5fd150e