ಸಿಂಹಗಳು ಜಿರಾಫೆಗಳನ್ನು ಬೇಟೆಯಾಡುತ್ತವೆ, ಆದರೆ ಸಿಂಹಗಳಿಗೆ ಈ ಬೇಟೆ ಅಪಾಯಕಾರಿ ಮತ್ತು ಕಠಿಣವಾಗಿರುತ್ತವೆ. ಆದರೆ ಅಸಹಾಯಕ, ಅನಾರೋಗ್ಯ, ಗರ್ಭಿಣಿ ಮತ್ತು ದುರ್ಬಲ, ಮರಿ ಜಿರಾಫೆಗಳನ್ನು ಸಿಂಹ ಟಾರ್ಗೆಟ್ ಮಾಡುತ್ತವೆ.
ಸಿಂಹಗಳು ಸಾಮಾನ್ಯವಾಗಿ ಹಿಂದಿನಿಂದ ಜಿರಾಫೆಯ ಮೇಲೆ ದಾಳಿ ಮಾಡುತ್ತವೆ, ಅವುಗಳನ್ನು ನೆಲಕ್ಕೆ ಬೀಳಿಸಿ, ಗಂಟಲು ಕಚ್ಚಿ ಸಾಯಿಸುತ್ತವೆ, ನಂತರ ಅವುಗಳನ್ನು ತಿನ್ನುತ್ತವೆ. ಇದೀಗ ತನ್ನ ತಾಯಿಯಿಂದ ಬೇರ್ಪಟ್ಟ ಮರಿ ಜಿರಾಫೆಯ ಮೇಲೆ ಸಿಂಹಿಣಿ ದಾಳಿ ಮಾಡುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣದ ವೈರಲ್ ಆಗುತ್ತಿದೆ.
ಸಿಂಹಿಣಿ ಏಕಾಂಗಿಯಾಗಿ ಬೇಟೆಯಾಡಲು ಬರುತ್ತದೆ ಮತ್ತು ಮರಿ ಜಿರಾಫೆಯತ್ತ ನುಗ್ಗುತ್ತದೆ. ತನ್ನ ಹಲ್ಲುಗಳನ್ನು ಜಿರಾಫೆಯ ಕುತ್ತಿಗೆಗೆ ಕಚ್ಚಿದ ತಕ್ಷಣ, ಮರಿ ಸಿಕ್ಕಿ ಬಿದ್ದಂತೆ ತೋರುತ್ತದೆ. ಇದನ್ನು ನೋಡಿದ ತಾಯಿ ಜಿರಾಫೆಯು ಸಿಂಹಿಣಿಯ ಕಡೆಗೆ ಚಾರ್ಜ್ ಮಾಡಲು ಬರುತ್ತದೆ. ತಾಯಿ ಜಿರಾಫೆಯ ಕೋಪವನ್ನು ನೋಡಿ, ಸಿಂಹಿಣಿಯು ತನ್ನ ಪ್ರಾಣ ಉಳಿಸಿಕೊಳ್ಳಲು ಓಡುತ್ತದೆ.