
ಹೌದು, ಅಧಿಕಾರಿಯು ಟ್ವಿಟ್ಟರ್ ನಲ್ಲಿ ಒಂದು ಅಮೂಲ್ಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬರು ತನ್ನ ಮೋಟಾರ್ ಸೈಕಲ್‌ನಲ್ಲಿ ದೊಡ್ಡ ಪ್ಲಾಸ್ಟಿಕ್ ಆಟಿಕೆಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆಟಿಕೆಯನ್ನು ಆ ವ್ಯಕ್ತಿ ತನ್ನ ಮಗುವಿಗೆ ಮನೆಗೆ ತೆಗೆದುಕೊಂಡು ಹೋಗುತ್ತಿರುವಂತೆ ತೋರುತ್ತಿದೆ. ಈ ಫೋಟೋ ನಿಮ್ಮ ಬಾಲ್ಯದ ನೆನಪುಗಳನ್ನು ಮತ್ತೆ ನೆನಪಿಸುವುದರಲ್ಲಿ ಸಂಶಯವಿಲ್ಲ.
ಇಂದು ರಾತ್ರಿ ಯಾರೋ ಒಬ್ಬರು ಬಹಳ ಸಂತೋಷದಿಂದ ಇರುವುದರಿಂದ ಅವರಿಗೆ ನಿದ್ದೆ ಬರಲು ಸಾಧ್ಯವಿಲ್ಲ ಎಂದು ಚಿತ್ರಕ್ಕೆ ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್ ಗೆ ಟನ್ ಗಳಷ್ಟು ಪ್ರತಿಕ್ರಿಯೆಗಳು ಬಂದಿವೆ. ಹಲವಾರು ಮಂದಿ ತಮ್ಮ ಬಾಲ್ಯದ ಸವಿ ನೆನಪುಗಳನ್ನು ನೆನಪಿಸಿಕೊಂಡು, ಪುಳಕಗೊಂಡಿದ್ದಾರೆ.