
ಹೌದು, ಟ್ವಿಟ್ಟರ್ ಬಳಕೆದಾರರೊಬ್ಬರು, ತಮ್ಮ ಆರು ವರ್ಷದ ಮಗ ಅಬೀರ್ ಸಹಿ ಮಾಡಿರುವ ಒಪ್ಪಂದದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಪುಟ್ಟ ಹುಡುಗನ ದೊಡ್ಡ ಒಪ್ಪಂದ ಪತ್ರದಲ್ಲಿ, ಆಟದ ಸಮಯದಿಂದ ಹಿಡಿದು ಊಟದ ಸಮಯದವರೆಗಿರುವ ದೈನಂದಿನ ವೇಳಾಪಟ್ಟಿಯಿದೆ. ಇದನ್ನ ಆತನೆ ಬರೆದಿದ್ದಾನೆ ಎನ್ನುವುದು ಗಮನಾರ್ಹ. ಇನ್ನು ಹೆಚ್ಚು ಗಮನಿಸಬೇಕಾದ ವಿಷಯ ಎಂದರೆ, ಅಲಾರಾಂ ಮೊಳಗಿದ ಹತ್ತು ನಿಮಿಷದ ನಂತರವೇ ನಾನು ಎಚ್ಚರವಾಗೋದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದನ್ನ.
ಊಟ ಮತ್ತು ಆಟದಿಂದ ಹಿಡಿದು ಹಾಲು ಕುಡಿಯಲು ಮತ್ತು ಹೋಮ್‌ವರ್ಕ್ ಮಾಡಲು ಕೂಡ ಸ್ಲಾಟ್‌ಗಳಿವೆ. ಇದಕ್ಕೆಲ್ಲಾ ಒಂದು ಕಂಡೀಷನ್ ಹಾಕಿರುವ ಅಬೀರ್, ತನ್ನ ದೈನಂದಿನ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ, ಅವನಿಗೆ ಹಣವನ್ನು ಬಹುಮಾನವಾಗಿ ನೀಡಬೇಕೆಂಬುದು. ದಿನವಿಡೀ ಅಳದೆ, ಕೂಗಾಡದೇ, ಗೊಣಗಾಡದೇ ಇದ್ರೆ ಹತ್ತು ರೂಪಾಯಿ, ಇಡೀ ವಾರ ಹೀಗೆ ಮುಂದುವರೆದರೆ ನೂರು ರೂಪಾಯಿ ನೀಡಬೇಕೆಂದು ತಂದೆ – ಮಗನ ನಡುವೆ ಒಪ್ಪಂದವಾಗಿದೆ. ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತಂದೆ-ಮಗನ ಒಪ್ಪಂದಕ್ಕೆ ನೆಟ್ಟಿಗರು ಶುಭ ಕೋರಿದ್ದಾರೆ. ಜೊತೆಗೆ ಅಬೀರ್ ನ ಮುದ್ದು ಮುಗ್ಧತೆಯನ್ನು ಉಲ್ಲೇಖಿಸಿ ಕಾಮೆಂಟ್ ಮಾಡಿದ್ದಾರೆ.