ಬೆಂಗಳೂರು: ಸಾಕು ತಂದೆ-ತಾಯಿಯಿಂದಲೇ ಮಗಳು ಮೋಸ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಕು ತಂದೆ-ತಾಯಿ 30 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ಯುವತಿ ಲಾವಣ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸಾಕು ತಂದೆ-ತಾಯಿಗಳಾದ ಮುನಿರೆಡ್ಡಿ ಹಾಗೂ ನಿರ್ಮಲಾ ಎಂಬುವವರು 30 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾರೆ.
ತಾನು ಬೆಸ್ಕಾಂ ನಲ್ಲಿ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಾಕು ತಂದೆ – ತಾಯಿಯಾದ ಮುನಿರೆಡ್ಡಿ ಹಾಗೂ ನಿರ್ಮಲಾ ಚೀಟಿ ವ್ಯವಹಾರ ನಡೆಸುತ್ತಿದ್ದರು. ಚೀಟಿಯಲ್ಲಿ ನಷ್ಟವಾದ ಕಾರಣ ಸಾಕು ಮಗಳು ಲಾವಣ್ಯಳಿಂದ ಹಣ ಪಡೆದುಕೊಂಡಿದ್ದರು. ಹಣ ವಾಪಸ್ ಕೇಳಿದಾಗ ಜಗಳವಾಡಿ ಮಗಳನ್ನೇ ಬೀದಿಗೆ ತಳ್ಳಿದ್ದಾರೆ.
ಇದರಿಂದ ಬೇಸತ್ತ ಲಾವಣ್ಯ ವಿಷಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದಳು. ನೆರೆಯವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ಇದೀಗ ಚೇತರಿಸಿಕೊಂಡಿದ್ದು, ತಂದೆ-ತಾಯಿ ಮೋಸದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.