ಸೂರ್ಯ ಪ್ರಪಂಚವನ್ನು ಪೋಷಿಸುವ ಪ್ರಮುಖ ಗ್ರಹ. ತಂದೆ ಕೂಡ ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ತಂದೆ ಕೂಡ ಪ್ರಾಣ ಹಾಗೂ ಜೀವನದ ಕೇಂದ್ರ. ಇದೇ ಕಾರಣಕ್ಕೆ ತಂದೆಯನ್ನು ಸೂರ್ಯನಿಗೆ ಹೋಲಿಸಲಾಗಿದೆ. ಜ್ಯೋತಿಷ್ಯದಲ್ಲಿ ಸೂರ್ಯನ ಸ್ಥಾನ ನೋಡಿ ತಂದೆ ಸ್ಥಿತಿಯನ್ನು ತಿಳಿಯಲಾಗುತ್ತದೆ.
ಸೂರ್ಯ ಅಂದ್ರೆ ತಂದೆಗೆ ಸನ್ಮಾನ ನೀಡದೆ ಹೋದಲ್ಲಿ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಜೀವನದಲ್ಲಿ ತಂದೆಗೆ ಅವಮಾನ ಮಾಡಿದ್ರೆ ಸೂರ್ಯನ ಶುಭ ಫಲಗಳು ಸಿಗುವುದಿಲ್ಲ.
ಮಾನ, ಸನ್ಮಾನ, ಗೌರವ ಕಡಿಮೆಯಾಗುತ್ತದೆ. ವೈಫಲ್ಯದ ಪರಿಸ್ಥಿತಿ ಎದುರಾಗುತ್ತದೆ.
ಎಲುಬಿನ ಸಮಸ್ಯೆ ಎದುರಾಗಲಿದೆ. ವಿಶೇಷವಾಗಿ ವಿಟಮಿನ್ ಡಿ ಸಮಸ್ಯೆ ಕಾಡಲಿದೆ.
ಹೃದಯ ರೋಗದ ಸಮಸ್ಯೆ ಕೂಡ ಎದುರಾಗಲಿದೆ.
ಉನ್ನತ ಅಧಿಕಾರಿಗಳ ಜೊತೆ ಸಂಬಂಧ ಸರಿಯಾಗಿರುವುದಿಲ್ಲ.
ಪದೇ ಪದೇ ನಿರುದ್ಯೋಗದ ಸಮಸ್ಯೆ ಕಾಡಲಿದೆ.
ತಂದೆಗೆ ಗೌರವ ನೀಡಿ, ಪ್ರೀತಿಯಿಂದ ನಡೆದುಕೊಂಡ್ರೆ ಏನಾಗುತ್ತದೆ ಗೊತ್ತಾ?
ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದ ಸೂರ್ಯ ಬಲ ಪಡೆಯುತ್ತಾನೆ.
ಮಾನ, ಸನ್ಮಾನ, ಗೌರವದಲ್ಲಿ ಯಾವುದೇ ಕೊರತೆ ಕಾಡುವುದಿಲ್ಲ.
ಆರೋಗ್ಯವಾಗಿರುವ ಜೊತೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ರಾಜಕೀಯದಲ್ಲಿ ಯಶಸ್ಸು ಸಿಗುತ್ತದೆ.
ತಂದೆಯ ಆಹಾರ, ಬಟ್ಟೆ, ಔಷಧಿಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ.
ತಂದೆ ಜೊತೆ ಹೋಗಿ ಬಂಗಾರದ ವಸ್ತುವನ್ನು ಖರೀದಿಸಿ ಅದನ್ನು ಬಳಸಿ.
ತಂದೆ ಜೊತೆ ಸಂಬಂಧ ಸರಿಯಾಗಿರಬೇಕೆಂದ್ರೆ ಸೂರ್ಯನ ಆರಾಧನೆ ಮಾಡಿ.
ರವಿವಾರ ಬೆಲ್ಲವನ್ನು ದಾನ ಮಾಡಿ,
ಭಾನುವಾರ ಉಪ್ಪು, ಶುಂಠಿ, ಸಾಸಿವೆ ಎಣ್ಣೆಯನ್ನು ಬಳಸಬೇಡಿ.