alex Certify ತಂದೆಯ ಪ್ರಾಣ ರಕ್ಷಿಸಿದ ಆರರ ಬಾಲಕಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯ ಪ್ರಾಣ ರಕ್ಷಿಸಿದ ಆರರ ಬಾಲಕಿ……!

ಆರು ವರ್ಷದ ಬಾಲಕಿಯೊಬ್ಬಳು ತನ್ನ ತಂದೆಯ ಪ್ರಾಣವನ್ನು ರಕ್ಷಿಸುವ ಮೂಲಕ ಸುದ್ದಿಯಾಗಿದ್ದಾಳೆ.

ಫೇಸ್ಬುಕ್ ನಲ್ಲಿ ಬಾಲಕಿ ಮ್ಯಾಸಿ ಹೇಗೆ ತನ್ನ ಪ್ರಾಣವನ್ನು ಉಳಿಸಿದಳು ಅನ್ನೋದನ್ನು ತಂದೆ ವಿವರವಾಗಿ ಹಂಚಿಕೊಂಡಿದ್ದಾರೆ. ಕಣ್ಣು ಮಿಟುಕಿಸುವಿಕೆಯಲ್ಲಿ ನಿಮ್ಮ ಜೀವನವು ಎಷ್ಟು ಬದಲಾಗಬಹುದು ಎಂದು ನಿಮಗೆ ತಿಳಿದಿಲ್ಲ ಎಂದು ಅವರು ಬರೆದಿದ್ದಾರೆ. ಮಕ್ಕಳಿಗೆ ತುರ್ತು ಸನ್ನಿವೇಶಗಳನ್ನು ಮತ್ತು ಶಾಲಾ ಪಾಠವನ್ನು ಒಳಗೊಂಡಿರದ ಜೀವನದ ಘಟನೆಗಳನ್ನು ಕಲಿಸುವಂತೆ ಜನರಲ್ಲಿ ಒತ್ತಾಯಿಸಿದ್ದಾರೆ.

ಜೀವನ ತುಂಬಾ ಚಿಕ್ಕದಾಗಿದೆ. ಆದರೆ, ಮಗಳು ಮ್ಯಾಸಿ ತನ್ನ ಪ್ರಾಣ ರಕ್ಷಿಸಿದ್ದರಿಂದ ಪುನರ್ಜೀವ ಸಿಕ್ಕಿದೆ ಎಂದು ಭಾವುಕರಾಗಿ ನುಡಿದಿದ್ದಾರೆ. ಅಂದಹಾಗೆ, ಮ್ಯಾಸಿಯ ತಂದೆ ಕುಸಿದು ಬಿದ್ದು ಪ್ರಜ್ಞಾಹೀನರಾದಾಗ, ಮಗು ಪಟ್ಟಣ ಪೊಲೀಸ್ ಇಲಾಖೆಯ ಸಂಖ್ಯೆಯನ್ನು ಹುಡುಕಿ ಅವರಿಗೆ ಕರೆ ಮಾಡಿದೆ. ಅಲ್ಲಿ ಅವರು ಇಲಾಖೆಯ ಆಡಳಿತ ಸಹಾಯಕ ಜೂಡಿ ಸ್ಮಿತ್ ಅವರೊಂದಿಗೆ ಮಾತನಾಡಿ ಅಗತ್ಯ ಸಹಾಯವನ್ನು ಪಡೆದಿದ್ದಾರೆ. ಈ ಮೂಲಕ ಆರರ ಪೋರಿ ತನ್ನ ತಂದೆಯ ಪ್ರಾಣವನ್ನು ಉಳಿಸಿದ್ದಾಳೆ.

ಈ ವಿವರವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಾಗಿನಿಂದ, ಪುಟ್ಟ ಮಗುವಿನ ಬಗ್ಗೆ ನೆಟ್ಟಿಗರು ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಕೆಯನ್ನು ಲಿಟಲ್ ಏಂಜೆಲ್ ಎಂದು ಕರೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...