ಬೆಳಗ್ಗೆ ಎದ್ದು ಮುಖ ತೊಳೆದು, ಮುಂಜಾನೆಯ ನಿತ್ಯಕರ್ಮ ಮುಗಿಸಿದ ಮೇಲೆ ಹಳ್ಳಿಗಾಡಿನ ಅದರಲ್ಲೂ ರೈತಾಪಿ ಜನರು ತಂಗಳನ್ನು ಉಣ್ಣುತ್ತಾರೆ.
ರಾತ್ರಿ ಉಳಿದ ಅನ್ನಕ್ಕೆ ಉಪ್ಪಿನಕಾಯಿ ಇಲ್ಲವೇ ಚಟ್ನಿಪುಡಿ ಅಥವಾ ರಾತ್ರಿಯ ಸಾಂಬಾರಿನಲ್ಲಿ ಒಂದೆರಡು ಮುದ್ದೆ ತಿನ್ನುತ್ತಾರೆ. ಉಳಿದ ಅನ್ನಕ್ಕೆ ಮೊಸರು ಇಲ್ಲವೇ ಮಜ್ಜಿಗೆ ಹಾಕಿಕೊಂಡು ಹಸಿಮೆಣಸು ಕಿವುಚಿ ಊಟ ಮಾಡುತ್ತಾರೆ.
ಹೀಗೆ ತಿನ್ನುವವರು ಇಡೀ ದಿನ ಉತ್ಸಾಹದಿಂದ, ಶಕ್ತಿವಂತರಾಗಿ ಇರುತ್ತಾರಂತೆ. ಯಾಕೆಂದರೆ……
ತಂಗಳನ್ನದಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಐರನ್, ವಿಟಮಿನ್ ಗಳು 15 ಪಟ್ಟು ಹೆಚ್ಚು ಇರುತ್ತದಂತೆ. ಈರುಳ್ಳಿ, ಹಸಿಮೆಣಸು ಕಿವುಚಿ ಮೊಸರಿನೊಡನೆ ತಿಂದರೆ ಶರೀರದ ಉಷ್ಣ, ನೋವುಗಳೆಲ್ಲಾ ಶಮನವಾಗುತ್ತವೆ.
ಶರೀರಕ್ಕೆ ಅಗತ್ಯದ ಶಕ್ತಿಯನ್ನು ನೀಡುತ್ತದೆ. ದೇಹವು ಒತ್ತಡಕ್ಕೆ ಸಿಲುಕದಂತೆ ಕಾಪಾಡುತ್ತದೆ.
ಅಷ್ಟೇ ಅಲ್ಲ, ರಾತ್ರಿ ಉಳಿದ ಅನ್ನಕ್ಕೆ ಸ್ವಲ್ಪ ಹಾಲು, ಸ್ವಲ್ಪ ಈರುಳ್ಳಿ ಚೂರುಗಳು, ಶುಂಠಿ ಚೂರು, ಕರಿಬೇವು, ಜೀರಿಗೆ ಹಾಕಿ, ಅದಕ್ಕೆ ತುಸು ಮೊಸರು ಬೆರೆಸಿ ಕಲಸಿ ತಿಂದರೆ ಹೊಟ್ಟೆಯ ಎಲ್ಲಾ ಅನಾರೋಗ್ಯಗಳು ಇಲ್ಲವಾಗುತ್ತವೆ.
ಇದರಿಂದ ಎಲುಬುಗಳು ಬಲಗೊಳ್ಳುತ್ತವೆ. ತಂಗಳನ್ನ ಒಳ್ಳೆಯದು ಎಂದು ತಿಳಿದೂ, ಹಾಗೆಯೇ ಇಟ್ಟುಬಿಟ್ಟರೆ ಹಾಳಾಗಿ ಹೋಗುತ್ತದೆ. ಹಾಗಾಗಿ ಬೆಳಗ್ಗೆ ಬೇಗನೆ ತಿಂದು ಮುಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.