ಬೆಂಗಳೂರು : ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ಡ್ರಗ್ ಪೆಡ್ಲರ್ ಗಳು ಹಲವು ರೀತಿಯ ವಾಮ ಮಾರ್ಗಗಳನ್ನು ಹುಡುಕುತ್ತಲೇ ಇದ್ದಾರೆ. ಪ್ರತಿ ದಿನ ಒಂದಿಲ್ಲೊಂದು ಡ್ರಗ್ ದಂಧೆಕೋರರ ಐಡಿಯಾಗಳು ಹೊರ ಬೀಳುತ್ತಿವೆ. ಇತ್ತೀಚೆಗಷ್ಟೇ ದಿನಸಿ ವಸ್ತುಗಳನ್ನು ಮನೆಗೆ ತಲುಪಿಸುವ ನೆಪದಲ್ಲಿ ಡ್ರಗ್ಸ್ ಪೂರೈಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದರು. ಈಗ ಪೊಲೀಸರು ಮತ್ತೊಂದು ಮಾರ್ಗ ಕಂಡುಕೊಂಡಿದ್ದ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಳಿಗ್ಗೆ ಡ್ರಗ್ ಮಾರಾಟ ಮಾಡಿದರೆ ಸಿಕ್ಕಿ ಬೀಳುವ ಸಾಧ್ಯತೆ ಇರುವುದರಿಂದಾಗಿ ಈ ಪೆಡ್ಲರ್ ಗಳು ರಾತ್ರಿ ಹೊತ್ತು ಮತ್ತೇರಿಸುವ ಡ್ರಗ್ ಡೀಲ್ ನಡೆಸುತ್ತಿದ್ದರಂತೆ. ರಾತ್ರಿ ಸಮಯದಲ್ಲಿ ಮರದ ಬಳಿ ಸಿಂಥೇಟಿಕ್ ಡ್ರಗ್ಸ್ ಮುಚ್ಚಿಟ್ಟು, ಅದರ ಲೋಕೇಶನ್ ನ್ನು ಗ್ರಾಹಕರಿಗೆ ಕಳುಹಿಸಲಾಗುತ್ತಿತ್ತು. ಅದರ ಮೂಲಕ ಗ್ರಾಹಕರು ಡ್ರಗ್ಸ್ ಪಡೆಯುತ್ತಿದ್ದರು. ಸದ್ಯ ಪೊಲೀಸರು ಪೆಡ್ಲರ್ ಗಳ ಈ ಐಡಿಯಾವನ್ನೂ ಬೇಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಮಡಿವಾಳದ ಹತ್ತಿರ ಐವರನ್ನು ಬಂಧಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಪೆಡ್ಲರ್ ಗಳು ತಮ್ಮ ಡ್ರಗ್ ಮಾರಾಟದ ಹಾದಿಯ ಬಗ್ಗೆ ಬಾಯಿ ಬಿಟ್ಟಿದ್ದಾರೆ.