ಪ್ರೀತಿಯ ಸಂಬಂಧದಲ್ಲಿ ಬಂಧಿಯಾಗಿರುವ ಜೋಡಿಗಳ ಕನಸುಗಳು ವಿಭಿನ್ನವಾಗಿರುತ್ತವೆ. ವಿದ್ಯಾಭ್ಯಾಸ ಮುಗಿದ್ಮೇಲೆ ಒಳ್ಳೆ ಕೆಲಸ ಹುಡುಕಿ, ಒಂದು ಸೂರು ಹುಡುಕಿಕೊಂಡು, ಪ್ರೀತಿಸಿದವರೊಂದಿಗೆ ಮದುವೆಯಾಗಿ ಸುಖಿ ಸಂಸಾರ ನಡೆಸಿದ್ರೆ ಜೀವನ ಸಾರ್ಥಕ ಎನ್ನವುದು ಪ್ರತಿಯೊಬ್ಬ ಯುವ ಪ್ರೇಮಿಗಳ ಕನಸು. ಆದ್ರೆ ಈ ಇಬ್ಬರು ಖತರ್ನಾಕ್ ಜೋಡಿಗಳ ಪರಿಚಯವಾಗಿದ್ದು, ಪ್ರೀತಿಯಾಗಿದ್ದು ನಶೆಯ ವಿಚಾರದಲ್ಲಿ, ಅವರ ಜೀವನದ ಸಾಗುತ್ತಿದ್ದದ್ದು ಕೂಡ ಅದರ ಮಾರಾಟದಿಂದಲೇ.
ವಿಷ್ಣು ಪ್ರಿಯಾ ಹಾಗೂ ಸಿಗಿಲ್ ವರ್ಗಿಸ್ ಇಬ್ಬರೂ ಕೇರಳ ಮೂಲದ ಲವ್ ಬರ್ಡ್ಸ್. ವಿಷ್ಣು ಪ್ರಿಯಾಗೆ ತಾಯಿಯಿಲ್ಲ, ಆಕೆಯ ತಂದೆ ಇವಳ ವಿದ್ಯಾಭ್ಯಾಸಕ್ಕಾಗಿ ಕೊಯಮತ್ತೂರಿಗೆ ಶಿಫ್ಟ್ ಆಗಿದ್ರು. ಇತ್ತ ಪಿಯುಸಿ ವರೆಗೂ ಕೇರಳದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಸಿಗಿಲ್, ನಂತರ ಬಿಬಿಎ ಓದಲು ಕೊಯಮತ್ತೂರು ಕಡೆ ಮುಖ ಮಾಡಿದ್ದ. ಇಬ್ಬರು ಕೊಯಮತ್ತೂರಿನ ಕಾಲೇಜಿನಲ್ಲಿ ಭೇಟಿಯಾದರು. ಕೇರಳ ಮೂಲದವರಾಗಿದ್ರಿಂದ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ಆತ್ಮೀಯತೆ ಪ್ರೀತಿಯಾಯ್ತು, ಆಗ ಇವರ ನಡುವೆ ಬಂದದ್ದು ಗಾಂಜಾ, ಹಶಿಶ್ ಆಯಿಲ್ ನಂತಹ ಡ್ರಗ್ಸ್ ನಶೆ.
WAR BREAKING: ಯುದ್ಧ ಟ್ಯಾಂಕರ್ ನಿಂದ ಏಕಕಾಲದಲ್ಲಿ ಹಾರಿದ 40 ಮಿಸೈಲ್; ಖಾರ್ಕಿವ್ ನಲ್ಲಿ ಮೂರು ಮಕ್ಕಳು ಸೇರಿ 7 ಜನ ಸಾವು; ಬಂಕರ್ ನಲ್ಲಿ ಆಶ್ರಯ ಪಡೆಯಲು ಸೂಚನೆ
ಕಾಲೇಜು ದಿನಗಳಿಂದಲೇ ಡ್ರಗ್ಸ್ ನಶೆಯಲ್ಲಿ ತೇಲಿ ಮುಳುಗಿದ್ದ ಜೋಡಿ, ವಿದ್ಯಾಭ್ಯಾಸ ಮುಗಿದ್ಮೇಲೆ ಕೆಲಸ ಹುಡುಕಿಕೊಂಡು ಲೈಫ್ ಸೆಟಲ್ ಮಾಡಿಕೊಳ್ಳೋದನ್ನ ಬಿಟ್ಟು, ಡ್ರಗ್ಸ್ ದಂಧೆಗೆ ಇಳಿದ್ರು. ಕಾಲೇಜಿನಲ್ಲೆ ಕಂತೆ ಕಂತೆ ಹಣ ಕೊಟ್ಟು ಡ್ರಗ್ಸ್ ಕೊಂಡುಕೊಳ್ತಿದ್ದ ಇವ್ರು, ಡ್ರಗ್ ಪೆಡ್ಲಿಂಗ್ ಮಾಡಲು ಪ್ಲಾನ್ ಮಾಡಿಕೊಂಡರು. ಕೊಯಮತ್ತೂರಿಗಿಂತ ಬೆಂಗಳೂರಲ್ಲಿ ಡ್ರಗ್ಸ್ ಗೆ ಹೆಚ್ಚು ಬೇಡಿಕೆ ಇರೋದನ್ನ ತಿಳಿದುಕೊಂಡಿದ್ರು. ಹೀಗಾಗಿ ಮೂರು ತಿಂಗಳ ಹಿಂದೆ ಕೊತ್ತನೂರಿಗೆ ಶಿಫ್ಟ್ ಆಗಿದ್ದಾರೆ. ಸಿಗಿಲ್, ಕೇರಳದಿಂದ ಬರೊ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕಾಲೇಜಿನಲ್ಲಿ ಸೀಟ್ ಕೊಡಿಸ್ತಿದ್ದ. ಇತ್ತ ವಿಷ್ಣು ಪ್ರಿಯಾ ಟ್ಯಾಟೂ ಆರ್ಟಿಸ್ಟ್ ಆಗಿ ಕೆಲಸ ಮಾಡ್ತಿದ್ದಳು.
ಕಾಲೇಜು ಮಕ್ಕಳಿಗೆ ಡ್ರಗ್ಸ್ ನಶೆ ಹತ್ತಿಸ್ತಿದ್ದ ಜೋಡಿ ಒಳ್ಳೆ ಸಂಪಾದನೆ ಕೂಡ ಮಾಡ್ತಿದ್ರು. ವಿದ್ಯಾರ್ಥಿ ಸಮುದಾಯವನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಇವರು, ವಿಶಾಖಪಟ್ಟಣಕ್ಕೆ ತೆರಳಿ ಬಸ್ ನಲ್ಲಿ ಹಶಿಶ್ ಆಯಿಲ್ ತರ್ತಿದ್ರು. ಬಸ್ ನಲ್ಲಿ ಬಂದರೆ ಪೊಲೀಸರು ಪರಿಶೀಲನೆ ಮಾಡಲ್ಲ ಅನ್ನೋ ಮಾಸ್ಟರ್ ಪ್ಲಾನ್ ಇವರದ್ದು. ಇವರು ಕೂಡ ಪ್ರತಿದಿನ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರಂತೆ. ಈ ಡ್ರಗ್ಸ್ ಜೋಡಿಯ ಬಗ್ಗೆ ಮಾಹಿತಿ ಪಡೆದ ಹುಳಿಮಾವು ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 8 ಕೋಟಿ ಮೌಲ್ಯದ ಹಶಿಶ್ ಆಯಿಲ್, ಗಾಂಜಾ ವಶಕ್ಕೆ ಪಡೆದಿದ್ದಾರೆ. ಅಂದರೆ ಒಟ್ಟು 12 ಲೀಟರ್ 940 ಗ್ರಾಂ ಹಶಿಶ್ ಆಯಿಲ್, 26 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.