alex Certify ಈ ನೈಸರ್ಗಿಕ ಪದಾರ್ಥ ಬಳಸಿ ಡ್ಯಾಮೇಜ್ ಆದ ಕೂದಲಿಗೆ ಮತ್ತೆ ಜೀವ ತುಂಬಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನೈಸರ್ಗಿಕ ಪದಾರ್ಥ ಬಳಸಿ ಡ್ಯಾಮೇಜ್ ಆದ ಕೂದಲಿಗೆ ಮತ್ತೆ ಜೀವ ತುಂಬಿರಿ

ಅತಿಯಾದ ರಾಸಾಯನಿಕಗಳ ಬಳಕೆ, ಮಾಲಿನ್ಯ, ಶಾಖ, ಸೂರ್ಯನ ಕಿರಣಗಳಿಂದ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರಿ ಕೂದಲು ಒಣಗುತ್ತದೆ. ಇದರಿಂದ ಕೂದಲು ಡ್ಯಾಮೇಜ್ ಆಗುತ್ತದೆ. ಈ ಬಗ್ಗೆ ಚಿಂತೆ ಮಾಡದೆ ಕೂದಲಿಗೆ ಮತ್ತೆ ಜೀವ ತುಂಬಲು ಈ ನೈಸರ್ಗಿಕ ಪದಾರ್ಥಗಳನ್ನು ಬಳಸಿ.

*ಆವಕಾಡೋ ಹಣ್ಣಿನ ತಿರುಳಿಗೆ ಮೊಟ್ಟೆಯನ್ನು ಮಿಕ್ಸ್ ಮಾಡಿ ಈ ಪೇಸ್ಟ್ ನ್ನು ಕೂದಲಿಗೆ ಹಚ್ಚಿ 20 ನಿಮಿಷ ಕಾಲ ಬಿಟ್ಟು ಕೂದಲನ್ನು ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆಯಾದರೂ ಮಾಡಿ. ಇದರಿಂದ ಡ್ಯಾಮೇಜ್ ಆದ ಕೂದಲು ಮತ್ತೆ ಆರೋಗ್ಯವಾಗಿ ಬೆಳೆಯುತ್ತದೆ.

*ಡ್ಯಾಮೇಜ್ ಆದ ಕೂದಲು ಮತ್ತೆ ಸರಿಪಡಿಸಲು ಆಪಲ್ ಸೈಡರ್ ವಿನೆಗರ್ ತುಂಬಾ ಸಹಕಾರಿ. ಹಾಗಾಗಿ 1 ಚಮಚ ಆಪಲ್ ಸೈಡರ್ ವಿನೆಗರ್ ಗೆ 2 ಚಮಚ ಆಲಿವ್ ಆಯಿಲ್ ಮತ್ತು 3 ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಕೂದಲನ್ನು ಶಾಂಪೂವಿನಿಂದ ವಾಶ್ ಮಾಡಿ. ಇದರಿಂದ ಉತ್ತಮ ಫಲಿತಾಂಶ ಪಡೆಯುತ್ತೀರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...