ಹರಿಯಾಣ ಸುಂದ್ರಿಗೆ ಪೈಪೋಟಿ ನೀಡಿದ್ದಾರೆ ಈ ವೃದ್ಧ.. ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಮತ್ತೆ ನೆನಪಿಸಿದ್ದಾರೆ. ಡ್ಯಾನ್ಸರ್ ಸಪ್ನಾ ಚೌಧರಿ ವೇದಿಕೆ ಮೇಲೆ ಕುಣಿಯುತ್ತಿದ್ರೆ, ತಾನೇನು ಕಡಿಮೆಯಿಲ್ಲ ಎಂಬಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಈ ವೃದ್ಧ ಉತ್ಸಾಹದಿಂದ ಕುಣಿದಾಡಿದ್ದಾರೆ.
ಹೌದು, ಬಹುಶಃ ನಿಮಗೆ ಗೊತ್ತಿರುವಂತೆ ಡ್ಯಾನ್ಸರ್ ಸಪ್ನಾ ಚೌಧರಿ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅವರು ಸ್ಟೇಜ್ ಮೇಲೆ ಬಂದ್ರೆ ಸಾಕು ಜನ ಹುಚ್ಚೆದ್ದು ಕುಣಿಯುತ್ತಾರೆ. ಇದೀಗ ಸಪ್ನಾ ಚೌಧರಿ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ರೆ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವೃದ್ಧರೊಬ್ಬರು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಹಳೆಯದಾಗಿದ್ದು, ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದುವರೆಗೆ 2.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ವಿಡಿಯೋದಲ್ಲಿ ಸಪ್ನಾ ಚೌಧರಿ ಅವರು ಹಸಿರು ಬಣ್ಣದ ಉಡುಪು ಧರಿಸಿ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ. ಸಪ್ನಾ ತನ್ನ ಹರ್ಯಾನ್ವಿ ಹಾಡಿಗೆ ಲವಲವಿಕೆಯಿಂದ ಹೆಜ್ಜೆ ಹಾಕುತ್ತಿದ್ದರೆ ನೆರೆದಿದ್ದ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದ್ದಾರೆ. ಸಪ್ನಾ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ರೆ, ಪ್ರೇಕ್ಷಕರ ಗುಂಪಿನಲ್ಲಿದ್ದ ವೃದ್ಧರೊಬ್ಬರು ನೃತ್ಯಗಾರ್ತಿಗೆ ತಕ್ಕಂತೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.
ವೃದ್ಧರೊಬ್ಬರು ನೃತ್ಯ ಮಾಡುತ್ತಿರುವುದನ್ನು ಗಮನಿಸಿದ ಸಪ್ನ ಚೌಧರಿ ಅವರನ್ನು ಮತ್ತಷ್ಟು ಹುರಿದುಂಬಿಸುತ್ತಾ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರೂ ಕೂಡ ದೂರದಿಂದಲೇ ಕುಣಿದಿದ್ದು ಸಖತ್ ಖುಷಿ ಪಟ್ಟಿದ್ದಾರೆ. ಸದ್ಯ, ಈ ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಈ ಇಳಿವಯಸ್ಸಿನಲ್ಲೂ ವೃದ್ಧರ ಉತ್ಸಾಹ ಕಂಡು ನೆಟ್ಟಿಗರು ಖುಷಿಪಟ್ಟಿದ್ದಾರೆ.