ಇಂದೋರ್ ನಿವಾಸಿ ಆದಿತ್ಯ ತಿವಾರಿ ತಮ್ಮ ಮಗನ ಜೊತೆಗೆ ಮೌಂಟ್ ಎವರೆಸ್ಟ್ ಏರಲು ಸಿದ್ಧರಾಗಿದ್ದಾರೆ. ಆದಿತ್ಯ ಅವರ ಮಗ ಅವನೀಶ್ ಗೆ ಈಗ 7 ವರ್ಷ. 2016ರಲ್ಲಿ ಆದಿತ್ಯ ಅವನನ್ನು ದತ್ತು ಪಡೆದಿದ್ದರು. ಈ ಮಗು ಡೌನ್ ಸಿಂಡ್ರೋಮ್ ನಿಂದ ಬಳಲುತ್ತಿದೆ.
ಅಂಗವಿಕಲ ಹಾಗೂ ಅನಾಥ ಮಕ್ಕಳು ಕೂಡ ಯಾವ ಸಾಧನೆಯನ್ನಾದ್ರೂ ಮಾಡಬಹುದು ಎಂಬ ಅರಿವು ಮೂಡಿಸಲು ಮಗನ ಜೊತೆಗೆ ಮೌಂಟ್ ಎವರೆಸ್ಟ್ ಏರಲು ಸಜ್ಜಾಗಿರುವುದಾಗಿ ಆದಿತ್ಯ ಹೇಳಿದ್ದಾರೆ. ಮೌಂಟ್ ಎವರೆಸ್ಟ್ ಏರಲು ಕಳೆದ 6 ತಿಂಗಳಿಂದ ಅವರು ತರಬೇತಿ ಪಡೆದುಕೊಳ್ತಿದ್ದಾರೆ.
ಅವನೀಶ್, ಸಹಾನುಭೂತಿ ಅಥವಾ ಅಸಹಾಯಕತೆಯನ್ನು ಎದುರಿಸಬಾರದು ಅನ್ನೋದೇ ತಮ್ಮ ಆಸೆ ಎಂದು ಹೇಳಿಕೊಂಡಿದ್ದಾರೆ. ಅವನೀಶ್‌ಗೆ ಬಾಲ್ಯದಿಂದಲೂ ಡೌನ್ ಸಿಂಡ್ರೋಮ್ ಸಮಸ್ಯೆ ಇದೆ. ಇದನ್ನು ಟ್ರೈಸೋಮಿ 21 ಎಂದೂ ಕರೆಯುತ್ತಾರೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಆನುವಂಶಿಕ ಅಸ್ವಸ್ಥತೆಯಾಗಿದೆ. ಪ್ರತಿ ವರ್ಷ ಸುಮಾರು 6 ಸಾವಿರ ಮಕ್ಕಳು ಹುಟ್ಟುತ್ತಲೇ ಡೌನ್ ಸಿಂಡ್ರೋಮ್ ಗೆ ತುತ್ತಾಗುತ್ತಿದ್ದಾರೆ.