ಎಷ್ಟೇ ಹೈ-ಫೈ ಮೊಬೈಲ್ ಇದ್ದರೂ ಅಷ್ಟೆ, ಎಷ್ಟೇ ಅಪ್ಗ್ರೇಡ್ ಆ್ಯಪ್ಗಳಿದ್ದರೂ ಕೂಡಾ ಅಷ್ಟೆ. ಡೇಟಾ ಪ್ಯಾಕ್ ಇದ್ದರೇನೇ ಒಂದು ಬೆಲೆ. ಈ ಡೇಟಾ ಪ್ಯಾಕ್ ಇದ್ದರೆ ಸಾಕು ಕೂತಲ್ಲೇನೇ ಭೂಮಿಯ ಒಂದು ಸುತ್ತು ಹಾಕಬಹುದು.
ಇದೇ ಇಂಟರ್ನೆಟ್ ಡೇಟಾ ಪ್ಯಾಕ್ ಇಲ್ಲ ಅಂದ್ರೆ ಮೊಬೈಲ್ ಕೇವಲ ಖಾಲಿ ಡಬ್ಬಿ ಅನ್ನೊ ಲೆಕ್ಕ. ಅದಕ್ಕೆ ಈಗ ಈ ಸಮಸ್ಯೆಗೂ ಪರಿಹಾರ ಕಂಡು ಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಡೇಟಾ ಪ್ಯಾಕ್ ಇಲ್ಲದೇನೇ ವೀಕ್ಷಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ವಾರ್ತೆ ಮತ್ತು ಪ್ರಸಾರ ಭಾರತಿ ಸಚಿವಾಲಯ, ಈಗಾಗಲೇ ಐಐಟಿ ಕಾನ್ಪುರ್ ಜೊತೆ ಸೇರಿ ಈ ಸೇವೆ ಚಾಲ್ತಿಗೆ ತರುವುದರ ಕುರಿತು ಚರ್ಚೆ ನಡೆಸಿದೆ. ಇದಕ್ಕೆ ಡೈರೆಕ್ಟ್ ಟು ಮೊಬೈಲ್ ಬ್ರಾಡ್ಕಾಸ್ಟ್ ಅನ್ನೊ ಹೆಸರು ಕೂಡಾ ಕೊಡಲಾಗಿದೆ. ಹಾಗೇನಾದರೂ ಎಲ್ಲವೂ ಅಂದುಕೊಂಡ ಹಾಗೆಯೇ ಆಗಿದ್ದಲ್ಲಿ, ಮುಂದಿನ ದಿನಗಳಲ್ಲಿ 200ಕ್ಕೂ ಹೆಚ್ಚು ಚಾನೆಲ್ಗಳನ್ನ ಮೊಬೈಲ್ನಲ್ಲಿ ಇಂಟರ್ನೆಟ್ ಡೇಟಾ ಪ್ಯಾಕ್ ಇಲ್ಲದಿದ್ದರೂ ವೀಕ್ಷಿಸಬಹುದು.
ಭಾರತ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಎರಡು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಫೀಕ್ಕಿ ಫ್ರೆಮ್ಸ್ ಫಾಸ್ಟ್ ಟ್ರೆಕ್ 2022 ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ವೇಳೆ ಮಾಧ್ಯಮದ ಮುಂದ ಈ ವಿಷಯವನ್ನ ತಿಳಿಸಿದರು. 5ಜಿ ಬಂದ ಮೇಲೆ ಡೈರೆಕ್ಟ್-ಟು- ಮೊಬೈಲ್ ಬ್ರಾಡ್ಕಾಸ್ಟ್ ಬರುವ ದಿನಗಳು ತುಂಬಾ ದೂರದಲ್ಲಿಲ್ಲ ಅಂತ ಕೂಡ ಹೇಳಿದರು.
ಅಷ್ಟೆ ಅಲ್ಲ ಮುಂದಿನ 3-4 ವರ್ಷಗಳಲ್ಲಿ, ಈ ಕ್ಷೇತ್ರಗಳಲ್ಲಿ ಇನ್ನೂ ಅನೇಕ ಬದಲಾವಣೆಗಳಾಗಲಿದೆ. ಮಾಧ್ಯಮ ಹಾಗೂ ಮನರಂಜನೆ ಚಿತ್ರಣ ಇನ್ನಷ್ಟು ಹೊಸ ಹೊಸ ರೂಪ ಪಡೆಯಲಿದೆ. ಜೊತೆಗೆ ಯುವಕರಿಗೆ, ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾಹಿತಿಗಳು ಸುಲಭವಾಗಿ ಮೊಬೈಲ್ನಲ್ಲೇ ಸಿಗುವ ರೀತಿ ಮಾಡುವ ಆಲೋಚನೆ ಇದೆ ಅಂತ ಕೂಡಾ ಹೇಳಿದರು. ಅಲ್ಲಿಗೆ ಮುಂದಿನ ದಿನಗಳಲ್ಲಿ ಡೇಟಾ ಪ್ಯಾಕ್ ಇಲ್ಲ ಅನ್ನೊ ಕಿರಿಕಿರಿ ಯಾರಿಗೂ ಕಾಡೋಲ್ಲ.