ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ರೂಪಾಂತರಿ ವೈರಸ್ ಗಳು ದಿನದಿಂದ ದಿನಕ್ಕೆ ರೂಪ ಬದಲಿಸುತ್ತಿದ್ದು, ಜನರಲ್ಲಿ ಕ್ಷಣ ಕ್ಷಣಕ್ಕೂ ಆತಂಕವನ್ನು ಹೆಚ್ಚಿಸಿದೆ. ಎರಡನೇ ಅಲೆಗೆ ಕಾರಣವಾಗಿರುವ ಡೆಲ್ಟಾ ವೈರಸ್ ಇದೀಗ ಹೊಸ ರೂಪದಲ್ಲಿ ಡೆಲ್ಟಾ ಪ್ಲಸ್ ಆಗಿ ರೂಪಾಂತರಗೊಂಡು 3ನೇ ಅಲೆಯ ಅಟ್ಟಹಾಸ ಆರಂಭಕ್ಕೆ ನಾಂದಿ ಹಾಡಿದೆ ಎಂದು ಹೇಳಲಾಗುತ್ತಿದೆ.
ಡೆಲ್ಟಾ ಪ್ಲಸ್ ಹಾಗೂ ಕೋವಿಡ್ ಮೂರನೇ ಅಲೆ ಎಂಬುದು ಅಪಾಯಕಾರಿಯೇ ? ಇದು ಎಷ್ಟರ ಮಟ್ಟಿಗೆ ನಿಜ ? ಈ ವೈರಸ್ ಗಳ ಲಕ್ಷಣವೇನು ? ಯಾವ ರೀತಿ ಮುಂಜಾಗೃತೆ ವಹಿಸಬೇಕು ? ಆರಂಭವಾಗಿದ್ದು ಎಲ್ಲಿ ಎಂಬ ಹಲವು ವಿಚಾರಗಳ ಬಗ್ಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ.
ಕುತೂಹಲ ಮೂಡಿಸಿದ ಸಾಹುಕಾರ್ ರಣತಂತ್ರ: ‘ರಾಜೀ’ನಾ? ರಾಜೀನಾಮೆನಾ..?’2 -3 ದಿನದಲ್ಲಿ ರಾಜಕೀಯದಲ್ಲಿ ಬಿರುಗಾಳಿ ಸಾಧ್ಯತೆ
ಡೆಲ್ಟಾ ಪ್ಲಸ್ ವೈರಸ್ ವೇಗವಾಗಿ ನಮ್ಮ ದೇಹದಲ್ಲಿ ಹರಡುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕೆಲವೊಂದು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ಎಂದು ಹೇಳಿರುವ ಡಾ.ರಾಜು ಡೆಲ್ಟಾ ಪ್ಲಸ್, ಮೂರನೇ ಅಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಡಾ. ರಾಜು ಅವರ ಹೊಸ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.