ನಟ ಶಿವರಾಜ್ ಕುಮಾರ್ ಕನ್ನಡಪರ ಸಂಘಟನೆಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, ಡಿ. 31ಕ್ಕೆ ಬಂದ್ ಗೆ ಕರೆ ನೀಡಿರುವುದು ಕನ್ನಡಕ್ಕೆ ಮಾಡಿದ ದ್ರೋಹ ಎಂದು ಹೇಳಿದ್ದಾರೆ.
ಅಂದು ಕನ್ನಡದ ಕೆಲವು ಚಿತ್ರಗಳು ಬಿಡುಗಡೆಯಾಗಲಿದ್ದು, ಈ ಸಂದರ್ಭದಲ್ಲಿಯೇ ಬಂದ್ ಗೆ ಕರೆ ನೀಡಿರುವುದಕ್ಕೆ ಚಿತ್ರರಂಗಕ್ಕೆ ತುಂಬಾ ನೋವಾಗಿದೆ. ನಾನು ಯಾವಾಗಲೂ ಕನ್ನಡ ಪರವಾಗಿಯೇ ಇರುತ್ತೇನೆ. ನಮ್ಮ ಹೋರಾಟ ಕೂಡ ಕನ್ನಡ ಪರವಾಗಿಯೇ ಇರುತ್ತದೆ. ಆದರೆ, ಸಾಕಷ್ಟು ಹಣ ವ್ಯಯಿಸಿ ಚಿತ್ರಗಳನ್ನು ನಿರ್ಮಾಪಕರು ತಯಾರಿಸಿರುತ್ತಾರೆ. ಈ ಸಂದರ್ಭದಲ್ಲಿಯೇ ಹೋರಾಟಗಳು ನಡೆದರೆ, ಚಿತ್ರರಂಗಕ್ಕೆ ಅನ್ಯಾಯವಾಗುತ್ತದೆ ಎಂದು ಹೇಳಿದರು.
SHOCKING NEWS: ಚಲಿಸುತ್ತಿದ್ದ ಬಸ್ ನಲ್ಲೇ ದುರಂತ; ಹೃದಯಾಘಾತದಿಂದ ಮೃತಪಟ್ಟ ನಿರ್ವಾಹಕ
ಹೋರಾಟಗಳು ಉತ್ತಮ ರೀತಿಯಲ್ಲಿಯೇ ನಡೆಯಬೇಕು. ಆದರೆ, ಡಿ. 31ನ್ನೇ ಬಂದ್ ಗಾಗಿ ಆಯ್ಕೆ ಮಾಡಿಕೊಳ್ಳಬಾರದಿತ್ತು. ಅಂದು ಬಂದ್ ಅವಶ್ಯಕತೆ ಇರಲಿಲ್ಲ ಎಂದು ʼಬಡವ ರಾಸ್ಕಲ್ʼ ಸಿನಿಮಾ ವೀಕ್ಷಿಸಿದ ನಂತರ ಮೈಸೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ವಿಕೃತ್ಯ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿ. 31ಕ್ಕೆ ಬಂದ್ ಗೆ ಕರೆ ನೀಡಿವೆ. ರಾಜ್ಯದಲ್ಲಿ ಎಂಇಎಸ್ ನ್ನು ಬ್ಯಾನ್ ಮಾಡಬೇಕು ಎಂಬುವುದು ಹೋರಾಟದ ಉದ್ಧೇಶವಾಗಿದೆ. ಆದರೆ, ಅಂದೇ ಬಂದ್ ಘೋಷಣೆ ಮಾಡಿರುವುದಕ್ಕೆ ಚಿತ್ರರಂಗ ಬೇಸರ ವ್ಯಕ್ತಪಡಿಸುತ್ತಿದ್ದು, ಲವ್ ಯು ರಚ್ಚು, ಹುಟ್ಟು ಹಬ್ಬದ ಶುಭಾಶಯಗಳು ಹಾಗೂ ಅರ್ಜುನ್ ಗೌಡ ಚಿತ್ರಗಳು ಅಂದು ತೆರೆ ಕಾಣುತ್ತಿವೆ.