ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ಯು.ಬಿ.ಶೆಟ್ಟಿ ಮನೆ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 70 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 28ರಂದು ಯು.ಬಿ.ಶೆಟ್ಟಿಗೆ ಸೇರಿದ ಧಾರವಾಡದ ಮನೆ, ಉಡುಪಿ ನಿವಾಸ, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿ ವೇಳೆ ಯು.ಬಿ.ಶೆಟ್ಟಿಗೆ ಸೇರಿದ ದಾಖಲೆಗಳಿಲ್ಲದ ಸುಮಾರು 70 ಕೋಟಿ ಮೌಲ್ಯದ ಆದಾಯ ಪತ್ತೆಯಾಗಿದೆ ಎನ್ನಲಾಗಿದೆ.
ಸಿವಿಲ್ ಗುತ್ತಿಗೆದಾರರಾಗಿರುವ ಯು.ಬಿ.ಶೆಟ್ಟಿ ಉತ್ತರ ಕರ್ನಾಟಕದಲ್ಲಿ ನೀರಾವರಿ ಪ್ರಾಜೆಕ್ಟ್ ಗಳಿಗಾಗಿ ನಕಲಿ ಬಿಲ್ ತೋರಿಸಿ ಹಣ ಮಂಜೂರು ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಐಟಿ ದಾಳಿ ವೇಳೆ ಮನೆಯಲ್ಲಿ ನಕಲಿ ಬಿಲ್ ಗಳು, ಎಲೆಕ್ಟ್ರಾನಿಕ್ ಡಿವೈಸ್ ಗಳು ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.