ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಎಲ್ರಿಗೂ ಗೊತ್ತು. ಧೂಮಪಾನ ನಮ್ಮ ಡಿ.ಎನ್.ಎ ಮೇಲೂ ಪರಿಣಾಮ ಬೀರುತ್ತದೆ. ಧೂಮಪಾನ ಕ್ಯಾನ್ಸರ್ ಗೆ ಕಾರಣವಾಗುತ್ತದೆ.
ಧೂಮಪಾನವು ಕೇವಲ ಶ್ವಾಸಕೋಶಕ್ಕಷ್ಟೇ ಅಲ್ಲ ದೇಹದ ಇತರ ಭಾಗಗಳಿಗೆ ಹಾನಿ ಉಂಟುಮಾಡುತ್ತದೆ.
ಬೀಡಿ, ಸಿಗರೇಟ್ ಹೊಗೆ ಮಾನವನ ಡಿ.ಎನ್.ಎ ಯನ್ನು ಆಕ್ರಮಿಸಿ ತೊಂದರೆ ಉಂಟು ಮಾಡುತ್ತದೆ. ಸಂಶೋಧನೆಯೊಂದು ಧೂಮಪಾನದ ಹಾನಿ ಬಗ್ಗೆ ಎಚ್ಚರಿಕೆ ನೀಡಿದೆ.
ಧೂಮಪಾನವನ್ನು ಎಂದೂ ಮಾಡದ ಹಾಗೂ ಧೂಮಪಾನ ಮಾಡುತ್ತಿರುವವರನ್ನು ಸಂಶೋಧಕರು ಅಧ್ಯಯನಕ್ಕೆ ಬಳಸಿಕೊಂಡಿದ್ದರು. ಧೂಮಪಾನಿಗಳ ಡಿ.ಎನ್.ಎಯಲ್ಲಿ ಕೆಲವೊಂದು ಕೋಶಗಳು ನಷ್ಟವಾಗಿರುವ ಗುರುತುಗಳು ಕಂಡು ಬಂದಿವೆ. ಆದ್ರೆ ಈ ಗುರುತುಗಳು ಧೂಮಪಾನ ಮಾಡದವರ ಡಿ.ಎನ್.ಎ ಯಲ್ಲಿ ಕಂಡುಬರಲಿಲ್ಲ.