ಡಿಜಿ ಲಾಕರ್ ಅಥವಾ ಡಿಜಿಟಲ್ ಲಾಕರ್ ನಿಮ್ಮ ಮಹತ್ವದ ದಾಖಲೆಗಳನ್ನು ಕಾಪಾಡಿಕೊಳ್ಳಲು ಸರ್ಕಾರವೇ ಒದಗಿಸಿರುವ ಕ್ಲೌಡ್ ಸ್ಟೋರೇಜ್. ಡಿಎಲ್, ಆಧಾರ್, ಪಾನ್ ಕಾರ್ಡ್ ಸೇರಿದಂತೆ ನಿಮ್ಮ ವಿವಿಧ ದಾಖಲೆಗಳನ್ನು ಇದರಲ್ಲಿ ಸುಲಭವಾಗಿ ಸೇವ್ ಮಾಡಿ ಇಟ್ಟುಕೊಳ್ಳಬಹುದು.
ಡಿಜಿಲಾಕರ್ ಖಾತೆ ತೆರೆದ ಬಳಿಕ ನಿಮ್ಮ ದಾಖಲೆಗಳನ್ನೆಲ್ಲ ಅದರಲ್ಲಿ ಅಪ್ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಕ್ಲೌಡ್ ಸ್ಟೋರೇಜ್ನಲ್ಲಿ ನಿಮಗಾಗಿಯೇ ಪ್ರತ್ಯೇಕ ಸ್ಪೇಸ್ ನಿಗದಿಪಡಿಸಲಾಗಿರುತ್ತದೆ. ಅಲ್ಲಿ ನಿಮ್ಮ ದಾಖಲೆಗಳು ಸುರಕ್ಷಿತವಾಗಿರುತ್ತವೆ.
ನಿಮ್ಮ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನೇ ನೀವಿಲ್ಲಿ ನಮೂದಿಸಬೇಕಾಗುತ್ತದೆ. ಯಾವಾಗ ಬೇಕಾದರೂ ಮೊಬೈಲ್ ನಂಬರ್ ಅನ್ನು ಅಪ್ಡೇಟ್ ಮಾಡಲು ಸಹ ಅವಕಾಶವಿದೆ. ಡಿಜಿಲಾಕರ್ ಖಾತೆಯಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡೋದು ಹೇಗೆ ಅನ್ನೋದನ್ನು ನೋಡೋಣ.
ಮೊದಲು ನಿಮ್ಮ ಮೊಬೈಲ್ನಲಿ ಡಿಜಿ ಲಾಕರ್ ಖಾತೆಯನ್ನು ಓಪನ್ ಮಾಡಿ.
ನಿಮ್ಮ ಯೂಸರ್ ನೇಮ್ ಹಾಗೂ 6 ಡಿಜಿಟ್ನ ಸೆಕ್ಯೂರಿಟಿ ಕೋಡ್ ಬಳಸಿ ಅಕೌಂಟ್ಗೆ ಲಾಗಿನ್ ಆಗಿ.
ನಿಮ್ಮ ಲಾಗಿನ್ ಮಾಹಿತಿಗಳ ಪರಿಶೀಲನೆಗಾಗಿ ಮೊಬೈಲ್ ಸಂಖ್ಯೆಗೆ ಓಟಿಪಿ ಸಹ ಬರುತ್ತದೆ.
ಓಟಿಪಿ ನಮೂದಿಸಿದ ಬಳಿಕ ಕೆಳಭಾಗದಲ್ಲಿರುವ ಅಪ್ಡೇಟ್ ಯುವರ್ ಮೊಬೈಲ್ ನಂಬರ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನಿಮಗೆ ಕಳುಹಿಸಲಾದ UIDAI OTPಯನ್ನು ನಮೂದಿಸಿ.
ನಂತರ ನೀವು ಅಪ್ಡೇಟ್ ಮಾಡಿರುವ ಹೊಸ ಮೊಬೈಲ್ ಸಂಖ್ಯೆಗೆ ಡಿಜಿಲಾಕರ್ನಿಂದ ಓಟಿಪಿ ಬರುತ್ತದೆ. ಅದನ್ನು ನಮೂದಿಸಿದರೆ ನಿಮ್ಮ ಲಾಗಿನ್ ವಿವರಗಳೆಲ್ಲ ವೇರಿಪೈ ಆಗುತ್ತವೆ.
ಮೊಬೈಲ್ ನಂಬರ್ ಬದಲಾಗಿರುವ ಬಗ್ಗೆ ಡಿಜಿಲಾಕರ್ನಿಂದ ಕನ್ಫರ್ಮೇಶನ್ ಮೆಸೇಜ್ ಬರುತ್ತದೆ.