alex Certify ಡಾ. ರಾಜ್ – NTR ಕುಟುಂಬಕ್ಕೂ ಈ ಮೊದಲಿನಿಂದಲೂ ಇದೆ ಆತ್ಮೀಯ ಸಂಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಾ. ರಾಜ್ – NTR ಕುಟುಂಬಕ್ಕೂ ಈ ಮೊದಲಿನಿಂದಲೂ ಇದೆ ಆತ್ಮೀಯ ಸಂಬಂಧ

ಪವರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ಅವರಿಗೆ ಇಂದು ಕರ್ನಾಟಕದ ಅತ್ಯುನ್ನತ ಪುರಸ್ಕಾರ ‘ಕರ್ನಾಟಕ ರತ್ನ’ ಪುರಸ್ಕಾರ ಪ್ರದಾನ ಮಾಡಲಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಈ ಸಮಾರಂಭದಲ್ಲಿ ಖ್ಯಾತ ನಟರುಗಳಾದ ರಜನಿಕಾಂತ್ ಹಾಗೂ ಜ್ಯೂನಿಯರ್ ಎನ್.ಟಿ.ಆರ್. ಪಾಲ್ಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರೂ ನಟರು ಪುನೀತ್ ರಾಜಕುಮಾರ್ ಅವರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ರಜನಿಕಾಂತ್, ಪುನೀತ್ ರಾಜಕುಮಾರ್ ಅವರ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇನ್ನು ಜ್ಯೂನಿಯರ್ ಎನ್.ಟಿ.ಆರ್. ನಾನು ನಟನಾಗಿ ಇಲ್ಲಿ ಬಂದಿಲ್ಲ. ಪುನೀತ್ ರಾಜಕುಮಾರ್ ಅವರ ಆತ್ಮೀಯ ಗೆಳೆಯನಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ ಎಂದು ಹೇಳಿದ್ದಾರೆ.

ಅಂದ ಹಾಗೆ ರಾಜಕುಮಾರ್ ಅವರ ಕುಟುಂಬ ಹಾಗೂ ಎನ್.ಟಿ.ಆರ್. ಅವರ ಕುಟುಂಬ ಈ ಹಿಂದಿನಿಂದಲೂ ಆತ್ಮೀಯ ಸಂಬಂಧ ಹೊಂದಿದೆ. ಸಂದರ್ಶನ ಒಂದರಲ್ಲಿ ಸ್ವತಃ ಪುನೀತ್ ರಾಜಕುಮಾರ್, ಎನ್.ಟಿ.ಆರ್. ಕುಟುಂಬದ ಜೊತೆಗಿನ ಆತ್ಮೀಯ ಒಡನಾಟವನ್ನು ಮೆಲುಕು ಹಾಕಿದ್ದರು.

ಪುನೀತ್ ರಾಜಕುಮಾರ್ ಬಾಲ್ಯದ ಸಂದರ್ಭದಲ್ಲಿ ಎನ್.ಟಿ.ಆರ್. ಅವರ ಚಿತ್ರವೊಂದರ ಚಿತ್ರೀಕರಣಕ್ಕೆ ತೆರಳಿದ್ದರಂತೆ. ಈ ಸಂದರ್ಭದಲ್ಲಿ ಅಲ್ಲಿ ಉಪಯೋಗಿಸಿದ ಕಾರು ಒಂದು ಬಾಲಕ ಪುನೀತ್ ಅವರ ಗಮನ ಸೆಳೆದಿದೆ. ಈ ವಿಷಯವನ್ನು ಅವರು ಹೇಳುತ್ತಿದ್ದಂತೆ ಮಾರನೇ ದಿನ ಈ ಕಾರು ಅವರ ಮನೆ ಮುಂದೆ ನಿಂತಿತ್ತಂತೆ. ಬಳಿಕ ಅದನ್ನು ವಾಪಸ್ ಕಳುಹಿಸಿದ್ದರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...