
ಡಾಲರ್ ಎದುರು ರೂಪಾಯಿ ಮೌಲ್ಯ ಮುಗ್ಗರಿಸುತ್ತಲೇ ಇದೆ. ಇಂದು ಆರಂಭಿಕ ವಹಿವಾಟಿನಲ್ಲಿಯೇ ರೂಪಾಯಿ ಮೌಲ್ಯ 44 ಪೈಸೆಗಳಷ್ಟು ಕುಸಿತ ಕಂಡಿತು. ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 81.08 ಕ್ಕೆ ತಲುಪಿದೆ. ಅಮೆರಿಕನ್ ಕರೆನ್ಸಿಯ ಪ್ರಾಬಲ್ಯ ಮತ್ತು ಹೂಡಿಕೆದಾರರ ನಿರುತ್ಸಾಹವೇ ಇದಕ್ಕೆ ಕಾರಣ ಎನ್ನಲಾಗ್ತಿದೆ.
ಉಕ್ರೇನ್‌ನಲ್ಲಿ ಭೌಗೋಳಿಕ ರಾಜಕೀಯ ಅಪಾಯದ ಹೆಚ್ಚಳ, ಅಮೆರಿಕದ ಫೆಡ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್‌ನ ದರ ಹೆಚ್ಚಳ ಇವೆಲ್ಲವೂ ರೂಪಾಯಿ ಮೌಲ್ಯಕ್ಕೆ ಹೊಡೆತ ನೀಡುತ್ತಿವೆ. ಇದಲ್ಲದೆ ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೇರಿಕನ್ ಕರೆನ್ಸಿಯ ಬಲ ಹೆಚ್ಚಾಗಿದೆ. ದೇಶೀಯ ಷೇರುಗಳ ಬಗ್ಗೆ ನಕಾರಾತ್ಮಕ ಪ್ರವೃತ್ತಿಯೂ ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿದೆ.
ನಿನ್ನೆ ವಹಿವಾಟು ಅಂತ್ಯಕ್ಕೆ ರೂಪಾಯಿ ಮೌಲ್ಯ 83 ಪೈಸೆಗಳಷ್ಟು ಕುಸಿತ ದಾಖಲಿಸಿತ್ತು. ಕಳೆದ ಏಳು ತಿಂಗಳುಗಳಲ್ಲಿ ಡಾಲರ್ ಎದುರು ರೂಪಾಯಿ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 89.94 ಡಾಲರ್‌ಗೆ ಇಳಿದಿದೆ.