
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಸಿಎಂ ಮಮತಾ ಬ್ಯಾನರ್ಜಿ ಮೊಮೊ ಡಫ್‌ನಲ್ಲಿ ಫಿಲ್ಲಿಂಗ್ ಹಾಕಿ ಅದನ್ನು ರೂಪಿಸುತ್ತಿರುವುದನ್ನು ನೋಡಬಹುದು. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
ಇದು ಪ್ರಧಾನಿ ನರೇಂದ್ರ ಮೋದಿಯವರ ಚಾಯ್ ಪೇ ಚರ್ಚಾದ ವಾರಗಳ ನಂತರ ಮಮತಾ ಬ್ಯಾನರ್ಜಿ ಅವರು ಮೊಮೊ ತಯಾರಿಸಿ ಸುದ್ದಿಯಾಗಿದ್ದಾರೆ. ಮಾರ್ಚ್ 4ರಂದು ಪ್ರಧಾನಿ ಮೋದಿ ವಾರಣಾಸಿಯಲ್ಲಿ ಬೃಹತ್ ರೋಡ್ ಶೋ ನಡೆಸಿದ್ದರು. ಈ ವೇಳೆ ಟೀ ಸ್ಟಾಲ್‌ನಲ್ಲಿ ಚಹಾ ಸೇವಿಸಿದ್ದರು. ಇದನ್ನು ಕಾಶಿಯ ಪುತ್ರ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಿವಾಸಿಗಳೊಂದಿಗೆ ಚಾಯ್ ಪೇ ಚರ್ಚಾ ಎಂದು ಬಿಜೆಪಿ ಟ್ವೀಟ್ ಮಾಡಿತ್ತು. ಪ್ರಧಾನಮಂತ್ರಿಯವರು ಚಹಾ ಸೇವಿಸುತ್ತಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ.
ಪ್ರಧಾನಿ ಮೋದಿ ಟೀ ಸ್ಟಾಲ್‌ನಲ್ಲಿದ್ದವರೊಂದಿಗೆ ಚಹಾ ಹೀರುತ್ತಾ ಸಂವಾದ ನಡೆಸಿದ್ದರು. 2014 ರಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ತಮ್ಮ ಪ್ರಚಾರದ ಸಮಯದಲ್ಲಿ ಪಿಎಂ ಮೋದಿ ಚಾಯ್ ಪೆ ಚರ್ಚಾವನ್ನು ಪ್ರಾರಂಭಿಸಿದ್ದರು. ಇದೀಗ ಡಾರ್ಜಿಲಿಂಗ್ ಪ್ರವಾಸದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮೊಮೊ ಖಾದ್ಯ ತಯಾರಿಸಿರುವುದು ವಿಶೇಷವಾಗಿದೆ.