ವಿಪರೀತ ಆಯಾಸವಾದಾಗ, ನಿದ್ದೆ ಕಡಿಮೆಯಾದಾಗ, ದೇಹಕ್ಕೆ ವಿಟಮಿನ್ ಗಳ ಕೊರತೆ ಉಂಟಾದಾಗ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲ ಕಾಣಿಸಿಕೊಳ್ಳುತ್ತದೆ. ಇದನ್ನು ನಿವಾರಿಸುವ ಬಗೆ ಇಲ್ಲಿದೆ ಕೇಳಿ.
ದಿನಕ್ಕೆ ಕನಿಷ್ಠ ಏಳು ಗಂಟೆ ನಿದ್ದೆ ಮಾಡಿ. ತರಕಾರಿ ಹಣ್ಣುಗಳನ್ನು ಹೇರಳವಾಗಿ ಸೇವಿಸಿ. ಕಂಪ್ಯೂಟರ್ ಬಳಿ ಕುಳಿತು ಕೆಲಸ ಮಾಡುವಾಗ ಕನಿಷ್ಠ ಎರಡು ಗಂಟೆಗೊಮ್ಮೆ ನಿಮ್ಮ ಕಣ್ಣುಗಳಿಗೆ ವಿರಾಮ ನೀಡಿ.
ಒಮ್ಮೆ ಕಣ್ಣಿನಡಿ ಕಪ್ಪು ಸರ್ಕಲ್ ಕಾಣಿಸಿಕೊಂಡರೆ ಅವು ಬೇಗ ದೂರವಾಗುವುದೇ ಇಲ್ಲ. ಹಾಲಿನಲ್ಲಿ ಕಾಟನ್ ಅದ್ದಿ ಅದನ್ನು ಕಣ್ಣುಗಳ ಕೆಳಭಾಗಕ್ಕೆ ಮಸಾಜ್ ಮಾಡಿ. ಹತ್ತು ನಿಮಿಷ ಹೀಗೇ ಮಾಡಿ ಬಳಿಕ ಮುಖ ತೊಳೆಯಿರಿ. ಇದರಿಂದ ಕಪ್ಪು ಕಲೆ ದೂರವಾಗುತ್ತದೆ.
ನಾಲ್ಕು ಹನಿ ವಿಟಮಿನ್ ಇ ಎಣ್ಣೆಯನ್ನು ತಂಪಾದ ನೀರಿನಲ್ಲಿ ಹಾಕಿ ಕಾಟನ್ ಅದ್ದಿ ಕಣ್ಣನ್ನು ಒರೆಸಿ. ಇದನ್ನು ನಿತ್ಯ ಮಾಡಬಹುದು. ಸೌತೆಕಾಯಿ ಹೋಳುಗಳೂ ನಿಮ್ಮ ಕಣ್ಣಿನ ಸಮಸ್ಯೆಯನ್ನು ದೂರ ಮಾಡುತ್ತವೆ.
ಗ್ರೀನ್ ಟೀ ಪೌಡರ್ ಅನ್ನು ತಣ್ಣೀರಿನಲ್ಲಿ ನೆನೆಸಿ. ಬಳಿಕ ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ಮೊಟ್ಟೆಯ ಬಿಳಿ ಭಾಗವೂ ಇದೇ ಪ್ರಯೋಜನವನ್ನು ನೀಡುತ್ತದೆ. ಆಲೂಗಡ್ಡೆ, ಟೊಮೆಟೊ ಹಣ್ಣುಗಳನ್ನು ಕಣ್ಣಿನ ಕೆಳಗೆ ಇಟ್ಟುಕೊಳ್ಳುವುದರಿಂದಲೂ ಡಾರ್ಕ್ ಸರ್ಕಲ್ ಸಮಸ್ಯೆ ದೂರವಾಗುತ್ತದೆ.