ಕಣ್ಣುಗಳ ಕೆಳಗೆ, ಮೊಣಕೈ, ಮೊಣಕಾಲಿನಲ್ಲಿರುವ ಡಾರ್ಕ್ ಸರ್ಕಲ್ ಗಳು ಯುವತಿಯರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇದ್ದಂತೆ. ಅದನ್ನು ಹೋಗಲಾಡಿಸಲು ಎಲ್ರೂ ಸಾಕಷ್ಟು ಸರ್ಕಸ್ ಮಾಡಿರ್ತಾರೆ. ಆದ್ರೆ ಕಪ್ಪು ಕಲೆಗಳನ್ನು ಹೋಗಲಾಡಿಸಲು ಅಷ್ಟೆಲ್ಲಾ ಕಷ್ಟಪಡಬೇಕಾಗಿಯೇ ಇಲ್ಲ, ಅದಕ್ಕಾಗಿ ಮೂರು ಸಿಂಪಲ್ ಟಿಪ್ಸ್ ಇಲ್ಲಿದೆ.
ಅಲೋವೆರಾ : ಇದು ಬಹಳ ಉಪಯುಕ್ತವಾದ ವಸ್ತು. ರೋಗಗಳಿಂದ ದೂರವಿಡುವುದು ಮಾತ್ರವಲ್ಲ, ಅಲೋವೆರಾ ನಿಮ್ಮ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅಲೋವೆರಾದ ಒಂದು ಸ್ಟಿಕ್ ತೆಗೆದುಕೊಳ್ಳಿ, ಅಲೋವೆರಾ ಜೆಲ್ ತೆಗೆದು, ನಿಮ್ಮ ದೇಹದ ಯಾವ್ಯಾವ ಭಾಗದಲ್ಲಿ ಕಪ್ಪು ಕಲೆಗಳಿವೆಯೋ ಅಲ್ಲೆಲ್ಲಾ ಅದನ್ನು ಹಚ್ಚಿಕೊಳ್ಳಿ. 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಲ್ಲಿ ತೊಳೆದುಕೊಳ್ಳಿ. ಪ್ರತಿದಿನ ಹೀಗೆ ಮಾಡುತ್ತಾ ಬಂದ್ರೆ ಕೆಲವೇ ದಿನಗಳಲ್ಲಿ ಡಾರ್ಕ್ ಸರ್ಕಲ್ ಮಾಯವಾಗುತ್ತದೆ.
ನಿಂಬೆಹಣ್ಣು : ನಿಂಬೆಹಣ್ಣಿನಿಂದ ಕಪ್ಪು ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆ್ಯಸಿಡ್ ಹಾಗೂ ಇತರ ಅಂಶಗಳಿಂದ ಡಾರ್ಕ್ ಸರ್ಕಲ್ ಮಾಯವಾಗುತ್ತದೆ. ಪ್ರತಿದಿನ ಅರ್ಧ ನಿಂಬೆಹಣ್ಣನ್ನು ತೆಗೆದುಕೊಂಡು ಮೊಣಕಾಲು ಹಾಗೂ ಮೊಣಕೈಗೆ ಹಚ್ಚಿಕೊಳ್ಳಿ. ಕೆಲವೇ ದಿನಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಕ್ಕೇ ಸಿಗುತ್ತದೆ.
ಆಲೂಗಡ್ಡೆ ಮತ್ತು ಸೌತೇಕಾಯಿ : ಆಲೂಗಡ್ಡೆ ಮತ್ತು ಸೌತೆಕಾಯಿಯ ಸ್ಲೈಸ್ ಮಾಡಿಕೊಳ್ಳಿ. ಅದನ್ನು ಸುಮಾರು 20 ನಿಮಿಷಗಳ ಕಾಲ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಕಣ್ಣುಗಳ ಸುತ್ತ ಇರುವ ಡಾರ್ಕ್ ಸರ್ಕಲ್ ಮಾಯವಾಗುತ್ತದೆ.