ಡಾರ್ಕ್ ಪ್ಯಾಚ್ ಸಮಸ್ಯೆ ಇಂದಿನ ಯುವಜನತೆಯನ್ನು ಬಹುವಾಗಿ ಕಾಡುವ ಸಮಸ್ಯೆ.
ಮೊದಲಿಗೆ ಮಚ್ಚೆ ರೂಪದಲ್ಲಿ ಚಿಕ್ಕದಾಗಿ ಕಾಣಿಸಿಕೊಂಡು ನಂತರ ದೊಡ್ಡದಾಗಿ ಬೆಳೆಯುವ ಡಾರ್ಕ್ ಪ್ಯಾಚೆಸ್ ಅನ್ನು ಮೆಲಾಸ್ಮಾ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಕೆನ್ನೆ ಮತ್ತು ಮೂಗಿನ ಮೇಲೆ ಕಾಣಿಸುತ್ತದೆ.
ಪ್ರತಿನಿತ್ಯವೂ ಲೋಳೆಸರವನ್ನು ಮುಖದ ಮೇಲೆ ಉಂಟಾಗಿರುವ ಡಾರ್ಕ್ ಪ್ಯಾಚ್ ಗಳಿಗೆ ಹಚ್ಚಿ ಉಜ್ಜಬೇಕು. ಹೀಗೆ 5 ರಿಂದ 6 ವಾರಗಳು ಸತತವಾಗಿ ಮಾಡುವುದರಿಂದ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತದೆ. ಈ ಲೋಳೆಸರವನ್ನು ಮಲಗುವ ಮುನ್ನ ಹಚ್ಚಿ, ಬೆಳಿಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಬೇಕು.
ಎರಡು ಚಮಚ ನಿಂಬೆ ಹಣ್ಣಿನ ರಸವನ್ನು ಕೈಗೆ ಹಾಕಿ ಮುಖದ ಮೇಲೆ ಆಗಿರುವ ಕಲೆಗಳ ಮೇಲೆ ಹಚ್ಚಿ ಇಪ್ಪತ್ತು ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.
ಗ್ರೀನ್ ಟೀ ಸಾಮಾನ್ಯವಾಗಿ ತೂಕವನ್ನು ಇಳಿಸಿಕೊಳ್ಳಲು ಬಳಸುತ್ತಾರೆ. ಇದು ಸೌಂದರ್ಯ ವೃದ್ದಿಗೂ ಕೂಡ ತುಂಬಾ ಸಹಾಯಕಾರಿಯಾಗಿದೆ. ದಿನಕ್ಕೆ ಎರಡು ಬಾರಿ ಗ್ರೀನ್ ಟೀ ಕುಡಿಯಿರಿ. ಗ್ರೀನ್ ಟೀ ರಸವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.